ಜೈಪುರದಲ್ಲಿ ಉದಯಿಸಿದ ʼಸೂರ್ಯʼವಂಶಿ
ಐಪಿಎಲ್ ನಲ್ಲಿ 2ನೇ ವೇಗದ ಶತಕ ದಾಖಲಿಸಿದ 14ರ ಬಾಲಕ ವೈಭವ್

ವೈಭವ್ ಸೂರ್ಯವಂಶಿ | PC : X
ಜೈಪುರ : ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಕೇವಲ 35 ಎಸೆತಗಳಲ್ಲಿ ತನ್ನ ಚೊಚ್ಚಲ ಶತಕವನ್ನು ಗಳಿಸಿ ಇತಿಹಾಸ ನಿರ್ಮಿಸಿದರು.
ವೈಭವ್ ಪ್ರಸಕ್ತ ಟೂರ್ನಿಯಲ್ಲಿ ಕೇವಲ 17 ಎಸೆತಗಳಲ್ಲಿ ವೇಗದ ಅರ್ಧಶತಕ ಗಳಿಸಿದ್ದಲ್ಲದೆ, ಐಪಿಎಲ್ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ.
ರಾಜಸ್ಥಾನ ತಂಡ ಗೆಲ್ಲಲು 210 ರನ್ ಗುರಿ ಬೆನ್ನಟ್ಟುವಾಗ ಭರ್ಜರಿ ಆರಂಭ ಒದಗಿಸಿರುವ ವೈಭವ್ 35 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 100 ರನ್ ಪೂರೈಸಿದರು.
ಲೆಜೆಂಡರಿ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ವೈಭವ್ ಐಪಿಎಲ್ನಲ್ಲಿ 2ನೇ ವೇಗದ ಶತಕ ಸಿಡಿಸಿದ ಸಾಧನೆ ಮಾಡಿದರು
Next Story