15 ವರ್ಷಗಳ ಕ್ರಿಕೆಟ್ ಪಯಣ: ಪಿಚ್ನಲ್ಲಿ ವಿರಾಟ್ ಕೊಹ್ಲಿ ಓಡಿದ್ದು 510 ಕಿ.ಮೀ!
Photo :ವಿರಾಟ್ ಕೊಹ್ಲಿ | PTI
ಮುಂಬೈ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 15 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ. 19 ವರ್ಷದ ಕೊಹ್ಲಿ 2008 ಆಗಸ್ಟ್ 18ರಂದು ತನ್ನ ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು.
ಈ 15 ವರ್ಷಗಳಲ್ಲಿ ವಿರಾಟ್ ಕೊಹ್ಲಿ ವಿಕೆಟ್ಗಳ ನಡುವೆ ರನ್ಗಳಿಗಾಗಿ ಎಷ್ಟು ಓಡಿರಬಹುದು? ಇಎಸ್ಪಿಎನ್ಕ್ರಿಕ್ಇನ್ಫೊ ಮಾಡಿರುವ ಲೆಕ್ಕಾಚಾರದಂತೆ, ಅವರು ಈವರೆಗೆ ವಿಕೆಟ್ಗಳ ನಡುವೆ ಸುಮಾರು 510 ಕಿಲೋಮೀಟರ್ ಓಡಿದ್ದಾರೆ!
ವರದಿಯ ಪ್ರಕಾರ, ಬೌಂಡರಿ ಮತ್ತು ಸಿಕ್ಸರ್ ಹೊರತುಪಡಿಸಿದ ರನ್ಗಳಿಗಾಗಿ ಅವರು ಸುಮಾರು 277 ಕಿ.ಮೀ. ಓಡಿದ್ದಾರೆ. ಅದೇ ವೇಳೆ, ನಾನ್-ಸ್ಟ್ರೈಕರ್ ಆಗಿ ತನ್ನ ಜೊತೆಗಾರರ ರನ್ಗಳಿಗಾಗಿ ಅವರು ಸುಮಾರು 233 ಕಿ.ಮೀ. ಓಡಿದ್ದಾರೆ.
2013ರಲ್ಲಿ ಝಿಂಬಾಬ್ವೆ ವಿರುದ್ಧದ ಭಾರತದ ಏಕದಿನ ಪಂದ್ಯವೊಂದರಲ್ಲಿ, ಕೊಹ್ಲಿ ವಿಕೆಟ್ಗಳ ನಡುವೆ ಓಡಿ 4 ರನ್ಗಳನ್ನು ಗಳಿಸಿರುವುದು ಪ್ರಸಿದ್ಧವಾಗಿದೆ.
Next Story