ಫಿಡೆ ಕ್ಯಾಂಡಿಡೇಟ್ಸ್ ಚೆಸ್: ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಡಿ.ಗುಕೇಶ್
ವಿಶ್ವ ಚಾಂಪಿಯನ್ ವಿರುದ್ಧ ಸ್ಪರ್ಧಿಸುವ ಅರ್ಹತೆ ಪಡೆದ ಅತೀ ಕಿರಿಯ ಆಟಗಾರನೆಂಬ ಹೆಗ್ಗಳಿಕೆ
PC :X/@FIDE_chess
ಟೊರಾಂಟೊ: ಭಾರತದ ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು, ವಿಶ್ವ ಚಾಂಪಿಯನ್ ವಿರುದ್ಧ ಸ್ಪರ್ಧಿಸುವ ಅರ್ಹತೆ ಪಡೆದ ಅತೀ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 40 ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್ ಸ್ಥಾಪಿಸಿದ್ದ ದಾಖಲೆ ಮುರಿದಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರವಿವಾರ ನಡೆದ 14ನೇ ಹಾಗೂ ಅಂತಿಮ ಸುತ್ತಿನಲ್ಲಿ 17 ವರ್ಷದ ಆಟಗಾರ ಡಿ.ಗುಕೇಶ್, ಅಮೆರಿಕದ ಹಿಕಾರು ನಕಾಮುರಾ ಅವರ ವಿರುದ್ಧ ಅಂತಿಮ ಸುತ್ತಿನ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು. ಇದರೊಂದಿಗೆ 14 ಸುತ್ತುಗಳಿಂದ 9 ಪಾಯಿಂಟ್ ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.
1984ರಲ್ಲಿ ರಷ್ಯದ ಗ್ಯಾರಿ ಕ್ಯಾಸ್ಪರೋವ್ ಅವರು ಆಗಿನ ವಿಶ್ವ ಚಾಂಪಿಯನ್, ತಮ್ಮದೇ ದೇಶದ ಅನತೋಲಿ ಕಾರ್ಪೋವ್ ಅವರೊಡನೆ ಸ್ಪರ್ಧಿಸುವ ಅರ್ಹತೆ ಪಡೆದಾಗ ಅವರಿಗೆ 22 ವರ್ಷ ವಯಸ್ಸಾಗಿತ್ತು. ಆ ದಾಖಲೆಯನ್ನು ಗುಕೇಶ್ ಮುರಿದಿದ್ದಾರೆ.
ಪ್ರಸಕ್ತ, ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಜೊತೆ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆಗೆ ಇನ್ನೂ ದಿನ ನಿಗದಿಯಾಗಿಲ್ಲ.
‘ತುಂಬಾ ಸಂತಸವಾಗಿದೆ. ನಾನು ಕೆಲಹೊತ್ತು ಇನ್ನೊಂದು ಮಹತ್ವದ ಪಂದ್ಯವನ್ನು ಗಮನಿಸಿದೆ. ನಂತರ ನನ್ನ ಸಲಹೆಗಾರ ಗ್ರೆಗೋರ್ಜ್ ಗಝೆವ್ಸ್ಕಿ ಜೊತೆ ವಾಕ್ ಹೊರಟಿದ್ದೆ’ ಎಂದು ಗೆದ್ದ ನಂತರ ಗುಕೇಶ್ ಪ್ರತಿಕ್ರಿಯಿಸಿದರು.
ಈ ಗೆಲುವಿಗೆ ಗುಕೇಶ್ ಅವರು 88,500 ಯೂರೊ (ಸುಮಾರು 78.50 ಲಕ್ಷ ರೂ.) ಬಹುಮಾನ ಪಡೆದರು. ಈ ಟೂರ್ನಿಯ ಒಟ್ಟು ಬಹುಮಾನದ ಮೊತ್ತ 4.44 ಕೋಟಿ ರೂ. ಇದೆ.
ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಬಿಟ್ಟರೆ, ಕ್ಯಾಂಡಿಡೇಟ್ಸ್ ಗೆದ್ದ ಭಾರತದ ಎರಡನೇ ಆಟಗಾರ ಡಿ.ಗುಕೇಶ್. ಆನಂದ್ 2014ರಲ್ಲಿ ಕೊನೆಯ ಬಾರಿ ಕ್ಯಾಂಡಿಡೇಟ್ಸ್ನಲ್ಲಿ ಜಯಶಾಲಿಯಾಗಿದ್ದರು. ಆ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿಶ್ವನಾಥನ್ ಆನಂದ್ ವಿರುದ್ಧ ಸೋತಿದ್ದರು.
‘ಅತಿ ಕಿರಿಯ ಚಾಲೆಂಜರ್ ಆಗಿದ್ದಕ್ಕೆ ಅಭಿನಂದನೆಗಳು ಗುಕೇಶ್. ನಿಮ್ಮ ಸಾಧನೆಯಿಂದ ವೆಸ್ಟ್ಬ್ರಿಜ್ ಆನಂದ್ ಚೆಸ್ ಅಕಾಡೆಮಿಗೆ ಹೆಮ್ಮೆ ಎನಿಸಿದೆ’ ಎಂದು ಆನಂದ್ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರೂ ಅಭಿನಂದನೆ ಸಲ್ಲಿಸಿದ್ದಾರೆ.
Gukesh exiting the venue after winning the 2024 #FIDECandidates! pic.twitter.com/REZMIfOO9q
— International Chess Federation (@FIDE_chess) April 22, 2024
Gukesh exiting the venue after winning the 2024 #FIDECandidates! pic.twitter.com/REZMIfOO9q
— International Chess Federation (@FIDE_chess) April 22, 2024
17-year-old Gukesh has smashed Kasparov's record as the youngest player to win the Candidates cycle and qualify for a match for the undisputed World Chess Championship title!#FIDECandidates pic.twitter.com/nIMH2SZTRO
— chess24 (@chess24com) April 22, 2024
The dream team! FIDE Candidates 2024 winner Gukesh with dad Rajinikanth, trainer Gajewski and sponsor Sandeep Singhal (WestBridge Capital). Photo: Sagar Shah pic.twitter.com/1sCzBvOotm
— ChessBase India (@ChessbaseIndia) April 22, 2024
India is exceptionally proud of @DGukesh on becoming the youngest-ever player to win the #FIDECandidates! Gukesh's remarkable achievement at the Candidates in Toronto showcases his extraordinary talent and dedication. His outstanding performance and journey to the top… pic.twitter.com/pfNhhRj7W2
— Narendra Modi (@narendramodi) April 22, 2024