2ನೇ ಟಿ-20: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು
ತಿಲಕ್ ವರ್ಮಾ ಗೆಲುವಿನ ರೂವಾರಿ
PC : PTI
ಚೆನ್ನೈ : ಅಗ್ರ ಸರದಿಯ ತಿಲಕ್ ವರ್ಮಾ(ಔಟಾಗದೆ 72, 55 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 2ನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ನಿಂದ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 166 ರನ್ ಗುರಿ ಪಡೆದಿರುವ ಭಾರತ ತಂಡವು 19.2 ಓವರ್ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಭಾರತ 19 ರನ್ ಗೆ 2 ವಿಕೆಟ್ ಕಳೆದುಕೊಂಡಿತು. ಆಗ ನಾಯಕ ಸೂರ್ಯಕುಮಾರ್ ರೊಂದಿಗೆ 3ನೇ ವಿಕೆಟ್ ಗೆ 39 ರನ್ ಸೇರಿಸಿದ ತಿಲಕ್ ವರ್ಮಾ ತಂಡವನ್ನು ಆಧರಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ತಿಲಕ್ ಅವರು ಸುಂದರ್ ಜೊತೆಗೆ 6ನೇ ವಿಕೆಟ್ ನಲ್ಲಿ 38 ರನ್ ಸೇರಿಸಿದರು.
ಇಂಗ್ಲೆಂಡ್ ಪರ ಬ್ರೆಂಡನ್ ಕಾರ್ಸ್(3-29) ಯಶಸ್ವಿ ಪ್ರದರ್ಶನ ನೀಡಿದರು. ಜೋಫ್ರಾ ಆರ್ಚರ್(1-60) ದುಬಾರಿ ಬೌಲರ್ ಎನಿಸಿಕೊಂಡರು.
Next Story