2ನೇ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ವೆಸ್ಟ್ಇಂಡೀಸ್ 146 ರನ್ಗೆ ಆಲೌಟ್
ನಹೀದ್ ರಾಣಾಗೆ ಐದು ವಿಕೆಟ್ ಗೊಂಚಲು
ನಹೀದ್ ರಾಣಾ | PC : X
ಕಿಂಗ್ಸ್ಟನ್ : ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 146 ರನ್ ಗಳಿಸಿ ಆಲೌಟಾಗಿದೆ. 18 ರನ್ ಹಿನ್ನಡೆ ಕಂಡಿದೆ.
ಬಾಂಗ್ಲಾದೇಶ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 164 ರನ್ ಗಳಿಸಿತ್ತು.
2ನೇ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ತಂಡವು 48 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 206 ರನ್ ಗಳಿಸಿದ್ದು 224 ರನ್ ಮುನ್ನಡೆಯಲ್ಲಿದೆ. ಜಾಕರ್ ಅಲಿ(36 ರನ್)ಹಾಗೂ ತೈಜುಲ್ ಇಸ್ಲಾಂ(14 ರನ್) ಕ್ರೀಸ್ನಲ್ಲಿದ್ದಾರೆ.
ಶಾದ್ಮನ್ ಇಸ್ಲಾಂ(46 ರನ್), ನಾಯಕ ಮೆಹದಿ ಹಸನ್(42 ರನ್), ಶಹದತ್ ಹುಸೈನ್(28 ರನ್) ಹಾಗೂ ಲಿಟನ್ ದಾಸ್(25 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
3ನೇ ದಿನದಾಟವಾದ ಸೋಮವಾರ 1 ವಿಕೆಟ್ ನಷ್ಟಕ್ಕೆ 70 ರನ್ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ವಿಂಡೀಸ್ ತಂಡವು ವೇಗದ ಬೌಲರ್ ನಹೀದ್ ರಾಣಾ(5-61)ದಾಳಿಗೆ ತತ್ತರಿಸಿ 65 ಓವರ್ಗಳಲ್ಲಿ 146 ರನ್ಗೆ ಸರ್ವಪತನಗೊಂಡಿತು. ಹಸನ್ ಮಹ್ಮೂದ್(2-19) ರಾಣಾಗೆ ಸಾಥ್ ನೀಡಿದರು.
ವಿಂಡೀಸ್ ಪರ ಅಗ್ರ ಸರದಿಯಲ್ಲಿ ಕಾರ್ಟಿ(40 ರನ್, 115 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಬ್ರಾತ್ವೇಟ್(39 ರನ್, 129 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.