3ನೇ ಟ್ವೆಂಟಿ-20: ತಿಲಕ್ ವರ್ಮಾಗೆ ಅರ್ಧಶತಕ ಪೂರೈಸಲು ಬಿಡದ ಹಾರ್ದಿಕ್ ಪಾಂಡ್ಯ, ‘ಸ್ವಾರ್ಥಿ’ ಎಂದು ಕರೆದ ಕ್ರಿಕೆಟ್ ಅಭಿಮಾನಿಗಳು
ಗಯಾನ: ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ವೇಳೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ದಿನಗಳಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದಾರೆ, ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಟೀಕೆಗೆ ಒಳಗಾಗಿದ್ದರು. 7 ವಿಕೆಟ್ ನಿಂದ ಸಲಭವಾಗಿ ಗೆದ್ದ 3 ನೇ ಟಿ 20 ಪಂದ್ಯದ ನಂತರ ಹಾರ್ದಿಕ್ ಬೇರೆಯ ಕಾರಣಕ್ಕಾಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಾನ್ ಸ್ಟ್ರೈಕ್ ನಲ್ಲಿದ್ದ ತಿಲಕ್ ವರ್ಮಾ ಗೆ 2ನೇ ಬಾರಿ ಟಿ-20ಯಲ್ಲಿ 50 ರನ್ ಪೂರ್ಣಗೊಳಿಸಲು ಕೇವಲ 1 ರನ್ ಅಗತ್ಯವಿದ್ದರೂ, ವರ್ಮಾಗೆ ಬ್ಯಾಟಿಂಗ್ ಅವಕಾಶ ನೀಡದ ಹಾರ್ದಿಕ್ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಅಂತ್ಯ ಹಾಡಿದರು.
18ನೇ ಓವರ್ನ 5ನೇ ಎಸೆತದಲ್ಲಿ ರೋವ್ ಮನ್ ಪೊವೆಲ್ ಅವರ ಬೌಲಿಂಗ್ನಲ್ಲಿ ಹಾರ್ದಿಕ್ ಸಿಕ್ಸರ್ ಸಿಡಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಆದರೆ, ಈ ಪ್ರಕ್ರಿಯೆಯಲ್ಲಿ ವರ್ಮಾ 49 ರನ್ ಗಳಿಸಿ ನಾಟೌ ಟ್ ಆಗಿ ಉಳಿದರು
ಅನುಭವಿ ಕ್ರಿಕೆಟಿಗ ಪಾಂಡ್ಯ ಅವರ ಈ ನಡವಳಿಕೆಯನ್ನು ಟೀಕಿಸಿದ ಕ್ರಿಕೆಟ್ ಅಭಿಮಾನಿಗಳು ಹಾರ್ದಿಕ್ ಅವರ ವರ್ತನೆ 'ಸ್ವಾರ್ಥ' ದಿಂದ ಕೂಡಿತ್ತು ಎಂದು ಕಿಡಿಕಾರಿದ್ದಾರೆ.
ಹಾರ್ದಿಕ್ ಓರ್ವ ಸ್ವಾರ್ಥ ಕ್ರಿಕೆಟಿಗ. ಯುವ ಆಟಗಾರ ತಿಲಕ್ ಗೆ ಅರ್ಧಶತಕ ಪೂರೈಸಲು ಒಂದು ರನ್ ಗಳಿಸಲು ಬಿಡಲಿಲ್ಲ. ಹಾರ್ದಿಕ್ ತಾನೊಬ್ಬ ಫಿನಿಶರ್ ಎಂದು ತೋರಿಸಿಕೊಳ್ಳಲು ಬಯಸಿದ್ದಾರೆ ಎಂದು ಓರ್ವ ಟ್ವಿಟರ್ ಬಳಕೆದಾರ ಬರೆದಿದ್ದಾರೆ.
ಹಾರ್ದಿಕ್ ಪಾಂಡ್ಯನಂತಹ ಸ್ವಾರ್ಥ ಆಟಗಾರನನ್ನು ನಾನು ಈ ತನಕ ನೋಡಿಲ್ಲ. ತಿಲಕ್ ಔಟಾಗದೆ 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾರ್ದಿಕ್ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಅಂತ್ಯ ಹಾಡಿದ್ದಾರೆ. ನಾಯಕನಾದವನು ಹೀಗೆ ಇರುವುದಾ? ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಕೇಳಿದ್ದಾನೆ.
ಪ್ರಸಕ್ತ ಸರಣಿಯಲ್ಲಿ ಟಿ-20 ತಂಡಕ್ಕೆ ಪಾದಾರ್ಪಣೆ ಮಾಡಿದ ವರ್ಮಾ, ತಂಡದಲ್ಲಿನ ಅತ್ಯಂತ ಸ್ಥಿರವಾದ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ತಾನಾಡಿದ ಕೊನೆಯ ಮೂರು ಪಂದ್ಯಗಳಲ್ಲಿ, ವರ್ಮಾ ಕ್ರಮವಾಗಿ 39, 51 ಮತ್ತು ಔಟಾಗದೆ 49 ರನ್ ಗಳಿಸಿದರು, ಯುವ ತಂಡದಲ್ಲಿ ನಿಜವಾದ ಆಧಾರಸ್ತಂಭವಾಗಿ ಹೊರಹೊಮ್ಮಿದರು.
ಸೂರ್ಯಕುಮಾರ್ ಯಾದವ್ ಅವರು ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ 83 ರನ್ ಗಳಿಸಿದರು. ಪಂದ್ಯದ ನಂತರದ ಪ್ರದಾನ ಸಮಾರಂಭದಲ್ಲಿ ಸೂರ್ಯ ಅವರನ್ನು ನಾಯಕ ಹಾರ್ದಿಕ್ ಶ್ಲಾಘಿಸಿದರು.
"ಸೂರ್ಯ ಹೇಳಿದಂತೆ, ಅವರು (ಸೂರ್ಯ ಹಾಗೂ ತಿಲಕ್) ಒಟ್ಟಿಗೆ ಆಡುತ್ತಾರೆ ಮತ್ತು ಒಟ್ಟಿಗೆ ಸಮಯ ಕಳೆಯುತ್ತಾರೆ, ತಂಡದಲ್ಲಿ ಸ್ಕೈ (ಸೂರ್ಯ) ಅವರಂತಹವರು ಇರುವುದು ಒಳ್ಳೆಯದು ಮತ್ತು ಅವರು ಜವಾಬ್ದಾರಿಯನ್ನು ತೆಗೆದುಕೊಂಡಾಗ ಅದು ಇತರರಿಗೆ ಸಂದೇಶವನ್ನು ಕಳುಹಿಸುತ್ತದೆ" ಎಂದು ಪಂದ್ಯದ ನಂತರ ಹಾರ್ದಿಕ್ ಹೇಳಿದರು.
#HardikPandya #INDvsWI #Dhoni such a shameful player with attitude . Don't ever try to compare your self with dhoni. Such a selfish player. Fuck off man from Indian team pic.twitter.com/NV9wcGSJfr
— Muvva Ashish (@MuvvaAshish) August 9, 2023
Tilak Varma needed one run to score his fifty and Hardik Pandya hit a six to win the game.
— Abdullah Neaz (@Abdullah__Neaz) August 8, 2023
Your thoughts?#INDvsWI #WIvsIND #TilakVarma #HardikPandyapic.twitter.com/gBdIDjps3e