ತಾಯ್ನಾಡಿಗೆ ವಾಪಸಾದ ಚೆಸ್ ವಿಶ್ವಕಪ್ ನಲ್ಲಿ ಬೆಳ್ಳಿ ವಿಜೇತ ಪ್ರಜ್ಞಾನಂದಗೆ ಅದ್ದೂರಿ ಸ್ವಾಗತ
Photo: Twitter
ಹೊಸದಿಲ್ಲಿ 2023 ರ FIDE ವಿಶ್ವಕಪ್ ನಲ್ಲಿ ಬೆಳ್ಳಿ ಪದಕವನ್ನು ಗಳಿಸಿ, FIDE ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿ ಪ್ರತಿಯೊಬ್ಬ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದ ಭಾರತದ ಚೆಸ್ ಚತುರ ಆರ್. ಪ್ರಜ್ಞಾನಂದ ಅವರು ಅಝರ್ ಬೈಜಾನ್ ನ ಬಾಕುವಿನಿಂದ ತಾಯ್ನಾಡಿಗೆ ಹಿಂದಿರುಗುತ್ತಿದ್ದಂತೆ ಬುಧವಾರ ಚೆನ್ನೈನ ವಿಮಾನ ನಿಲ್ದಾಣದಲ್ಲಿ ವೀರೋಚಿತ ಸ್ವಾಗತ ನೀಡಲಾಯಿತು.
ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಫೈನಲ್ ನಲ್ಲಿ ಸೋತರೂ ಆರ್. ಪ್ರಜ್ಞಾನಂದ ಅವರು ಅವರು ವಿಶ್ವಕಪ್ ನಲ್ಲಿನ ತಮ್ಮ ಪ್ರದರ್ಶನಕ್ಕಾಗಿ ದೇಶದಾದ್ಯಂತ ಪ್ರಶಂಸೆಯನ್ನು ಪಡೆದರು.
ರಾಜ್ಯ ಕ್ರೀಡಾ ಇಲಾಖೆಯ ಅಧಿಕಾರಿಗಳು ಪ್ರಜ್ಞಾನಂದರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅವರ ಅಭಿಮಾನಿಗಳು ನಿರ್ಗಮನ ದ್ವಾರದಲ್ಲಿ ಕಾತುರದಿಂದ ಕಾಯುತ್ತಿದ್ದರು ಪ್ರಜ್ಞಾನಂದಗೆ ಹೂವಿನ ಕಿರೀಟ, ಶಾಲು ಮತ್ತು ಹೂಗುಚ್ಛಗಳನ್ನು ನೀಡಿದರು. ಪ್ರಜ್ಞಾನಂದ ಹೆಜ್ಜೆ ಹಾಕುತ್ತಿದ್ದಂತೆ ಅವರ ಹಾದಿಯಲ್ಲಿ ಹೂವುಗಳನ್ನು ಚೆಲ್ಲಲಾಯಿತು. ಈ ಸಂದರ್ಭದಲ್ಲಿ ತಮಿಳುನಾಡಿನ ಜಾನಪದ ನೃತ್ಯಗಳಾದ ಕರಗಟ್ಟಂ ಹಾಗೂ ಒಯಿಲಾಟ್ಟಂ ಅನ್ನು ಕಲಾವಿದರು ಪ್ರದರ್ಶಿಸಿದರು.
"ನನಗೆ ನೀಡಿದ ಸ್ವಾಗತದಿಂದ ತುಂಬಾ ಸಂತೋಷವಾಗಿದೆ" ಎಂದು ಪ್ರಜ್ಞಾನಂದ ಪ್ರತಿಕ್ರಿಯಿಸಿದರು.
. ಪ್ರಜ್ಞಾನಂದ ಅವರು ತನಗೆ ನೀಡಿದ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಸ್ವೀಕರಿಸಿದರು ಹಾಗೂ ಅದನ್ನು ಬೀಸಿದರು.
ತನ್ನ 18ರ ವಯಸ್ಸಿನ ಮಗನಿಗೆ ನೀಡಿರುವ ಅದ್ದೂರಿ ಸ್ವಾಗತಕ್ಕೆ ನಾಗಲಕ್ಷ್ಮೀ ಸಂತೋಷ ವ್ಯಕ್ತಪಡಿಸಿದರು.
ಫಿಡೆ ವಿಶ್ವಕಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಕನಸಿನ ಓಟಕ್ಕೆ ನಾರ್ವೆ ಮ್ಯಾಗ್ನಸ್ ಕಾರ್ಲ್ ಸೆನ್ ಬ್ರೇಕ್ ಹಾಕಿದ್ದರು. ಅವರು ಆಗಸ್ಟ್ 24 ರಂದು ಅಝರ್ಬೈಜಾನ್ ನ ಬಾಕುನಲ್ಲಿ ನಡೆದ ಟೈ-ಬ್ರೇಕ್ ನಲ್ಲಿ ಕಾರ್ಲ್ ಸನ್ ಅವರು ಪ್ರಜ್ಞಾನಂದರನ್ನು 1.5-0.5 ರಿಂದ ಸೋಲಿಸಿದರು.
ವಿಶ್ವಕಪ್ ನಲ್ಲಿ 2ನೇ ಸ್ಥಾನ ಪಡೆದ ಹೊರತಾಗಿಯೂ, ಪ್ರಜ್ಞಾನಂದ ಅವರ ಸಾಧನೆಯು 140 ಕೋಟಿ ಜನರ ಕನಸುಗಳೊಂದಿಗೆ ಪ್ರತಿಧ್ವನಿಸಿತು ಎಂದು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಹೇಳಿದರು . ಬೆಳ್ಳಿ ಪದಕವನ್ನು ಗೆದ್ದು ಫಿಡೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಪ್ರವೇಶಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ.