ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಧ್ವಜ ಹಿಡಿದು ದೇಶದ ತಂಡವನ್ನು ಪೆರೇಡ್ ಆಫ್ ನೇಷನ್ಸ್ನಲ್ಲಿ ಮುನ್ನಡೆಸಿದ ಪಿವಿ ಸಿಂಧು, ಶರತ್ ಕಮಲ್
Photo: PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿದು ಹಿರಿಯ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್ ಮತ್ತು ಖ್ಯಾತ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಭಾರತದ ಒಲಿಂಪಿಕ್ಸ್ ತಂಡವನ್ನು ಪೆರೇಡ್ ಆಫ್ ನೇಷನ್ಸ್ನಲ್ಲಿ ಮುನ್ನಡೆಸಿದ್ದಾರೆ.
ಭಾರತೀಯ ಪುರುಷ ಒಲಿಂಪಿಕ್ ಕ್ರೀಡಾಳುಗಳು ಕುರ್ತಾ ಬುಂದಿ ಸೆಟ್ ಧರಿಸಿದ್ದರೆ ಮಹಿಳೆಯರು ರಾಷ್ಟ್ರಧ್ವಜದ ಬಣ್ಣ ಇರುವ ಸೀರೆ ಧರಿಸಿದ್ದರು.
ಅವರ ಉಡುಗೆಗಳಲ್ಲಿ ಸಾಂಪ್ರದಾಯಿಕ ಇಕಟ್-ಪ್ರೇರಿತ ಪ್ರಿಂಟ್ಗಳು ಮತ್ತು ಬನರಾಸಿ ಬ್ರೊಕೇಡ್ ಇದ್ದವು ಹಾಗೂ ಈ ಉಡುಗೆ ತರುಣ್ ತಹಿಲಿಯಾನಿ ಅವರಿಂದ ವಿನ್ಯಾಸಗೊಳಿಸಲ್ಪಟ್ಟಿದೆ.
ಪಿವಿ ಸಿಂಧು ಅವರು ಎರಡು ಒಲಿಂಪಿಕ್ ಪದಕ ವಿಜೇತರಾಗಿದ್ದು ಇದು ಅವರ ಮೂರನೇ ಒಲಿಂಪಿಕ್ಸ್ ಆಗಿದೆ.
ತಮಗೆ ಈ ಬಗ್ಗೆ ತುಂಬಾ ಹೆಮ್ಮೆಯಿದೆ, ಭಾರತಕ್ಕೆ ಮತ್ತೆ ಪದಕ ಗೆಲ್ಲುವ ಭರವಸೆಯಿದೆ, ಎಂದು ಸಿಂಧು ಹೇಳಿದ್ದಾರೆ.
ಎರಡು ಬಾರಿಯ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತರಾಗಿರುವ ಶರತ್ ಕಮಲ್ ಅವರಿಗೆ ಇಂದು ಐದನೇ ಒಲಿಂಪಿಕ್ ಕ್ರೀಡಾಕೂಟ ಆಗಿದೆ.