ಒಲಿಂಪಿಕ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ವಿನೇಶ್ ಫೋಗಟ್ ಗೆ ವಿಡಿಯೋ ಕರೆ ಮಾಡಿ ಅಭಿನಂದಿಸಿದ ನಟ ಆಮಿರ್ ಖಾನ್
PC : X \ @mandeeppunia1
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿ ಸೆಮಿ ಫೈನಲ್ ನಲ್ಲಿ ಗೆಲುವನ್ನು ಕಂಡು ಇತಿಹಾಸವನ್ನು ನಿರ್ಮಿಸಿದ್ದ ವಿನೇಶ್ ಫೋಗಟ್ ಗೆ ಬಾಲಿವುಡ್ ನಟ ಆಮಿರ್ ಖಾನ್ ಕರೆ ಮಾಡಿ ಮಾತುಕತೆಯನ್ನು ನಡೆಸಿದ್ದು, ಪೋಗಟ್ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸೆಮಿಫೈನಲ್ ನಲ್ಲಿ ಗೆಲುವನ್ನು ಕಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಆ ಬಳಿಕ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಂಡಿದ್ದರು.
2024ರ ಒಲಿಂಪಿಕ್ಸ್ ನಲ್ಲಿ ಪೋಗಟ್ ಅವರ ಗಮನಾರ್ಹ ಸಾಧನೆಗಾಗಿ ಅಭಿನಂದನೆಗಳನ್ನು ಸಲ್ಲಿಸಲು ಆಮೀರ್ ಫೋಗಟ್ ಅವರಿಗೆ ವೀಡಿಯೊ ಕರೆಯನ್ನು ಮಾಡಿದ್ದಾರೆ. ವೀಡಿಯೊ ಕಾಲ್ ಚಿತ್ರವು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಮಿರ್ ಖಾನ್ ಅಭಿಮಾನಿಗಳು ಈ ಕುರಿತ ಪೋಟೋವನ್ನು ಹಂಚಿಕೊಂಡಿದ್ದಾರೆ.
आमिर ख़ान ने विनेश फोगाट से वीडियो कॉल पर बात की है.
— Mandeep Punia (@mandeeppunia1) August 31, 2024
आपकी प्रतिक्रिया ? pic.twitter.com/qCeJvpMCzu
ಒಲಿಂಪಿಕ್ಸ್ ನಲ್ಲಿ ಅನರ್ಹತೆಯನ್ನು ಎದುರಿಸಿದ ನಂತರ, ಫೋಗಟ್ ಐಒಸಿ (ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ) ಮತ್ತು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ನ ತೀರ್ಪಿನ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಒಂದು ವಾರದ ಅವಧಿಯ ವಿಚಾರಣೆಯ ನಂತರ ಪೋಗಟ್ ಅವರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಲಾಗಿತ್ತು. ಇದಲ್ಲದೆ ಅನರ್ಹತೆಯ ಬಳಿಕ ವಿನೇಶ್ ಪೋಗಟ್ ಅಂತರಾಷ್ಟ್ರೀಯ ಪಂದ್ಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದರು.