ಅಹ್ಮದಾಬಾದ್, ಚೆನ್ನೈ ಪಿಚ್ಗಳು ಸಾಧಾರಣಮಟ್ಟದಲ್ಲಿವೆ ಎಂದ ಐಸಿಸಿ; ದ್ರಾವಿಡ್ ಅಸಮಾಧಾನ
ರಾಹುಲ್ ದ್ರಾವಿಡ್ Photo- PTI
ಧರ್ಮಶಾಲಾ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಆಡಿರುವ ಅಹ್ಮದಾಬಾದ್ ಹಾಗೂ ಚೆನ್ನೈ ಪಿಚ್ಗಳು ಸಾಧಾರಣಮಟ್ಟದಲ್ಲಿದ್ದವು ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ರೇಟಿಂಗ್ ನೀಡಿದೆ.
ಈ ನಿರ್ಧಾರಕ್ಕೆ ಟೀಮ್ ಇಂಡಿಯದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದರು.
ಚೆನ್ನೈನಲ್ಲಿ ಆಸ್ಟ್ರೇಲಿಯ ಹಾಗೂ ಅಹ್ಮದಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿತ್ತು. ಚೆನ್ನೈನಲ್ಲಿ ಆಸ್ಟ್ರೇಲಿಯವು 199 ಹಾಗೂ ಅಹ್ಮದಾಬಾದ್ನಲ್ಲಿ ಪಾಕಿಸ್ತಾನವು 191 ರನ್ಗೆ ಆಲೌಟಾಗಿದ್ದವು.
ಐಸಿಸಿಗೆ ಎಲ್ಲ ಗೌರವದೊಂದಿಗೆ ಆ ಎರಡು ಪಿಚ್ಗಳಿಗೆ ನೀಡಲಾದ ಸಾಧಾರಣ ರೇಟಿಂಗ್ ಅನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ. ಅವೆರಡು ಅತ್ಯುತ್ತಮ ಪಿಚ್ ಎಂದು ನಾನು ಭಾವಿಸುತ್ತೇನೆ. ನೀವು ಕೇವಲ 350 ರನ್ಗಳ ಪಂದ್ಯವನ್ನು ನೋಡಲು ಬಯಸಿದರೆ, ಅಂತಹ ಪಿಚ್ಗಳಿಗೆ ಮಾತ್ರ ಉತ್ತಮ ಪಿಚ್ ರೇಟಿಂಗ್ ನೀಡಲು ನೀವು ಬಯಸುವುದಾದರೆ ಅದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಆಟಗಾರರ ವಿಭಿನ್ನ ಕೌಶಲ್ಯಗಳ ಪ್ರದರ್ಶನವೂ ಆಗಬೇಕು ಎಂದು ದ್ರಾವಿಡ್ ಹೇಳಿದ್ದಾರೆ.