ನೂತನ ದಾಖಲೆ ಬರೆದ ನ್ಯೂಝಿಲ್ಯಾಂಡ್ ಸ್ಪಿನ್ನರ್ ಅಜಾಝ್ ಪಟೇಲ್
Photo credit: X/@BLACKCAPS
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ನ್ಯೂಝಿಲೆಂಡ್ ನಡುವಿನ ತೃತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಂಬೈ ಮೂಲದವರೇ ಆದ ನ್ಯೂಝಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಅಜಾಝ್ ಪಟೇಲ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಅವರ ಪಾಲಾಗಿದೆ.
ದ್ವಿತೀಯ ಇನಿಂಗ್ಸ್ ಆಡುತ್ತಿರುವ ಭಾರತ ತಂಡದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾರ ವಿಕೆಟ್ ಕೀಳುವ ಮೂಲಕ ಅಜಾಝ್ ಪಟೇಲ್ ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 23 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ, ಇಲ್ಲಿಯವರೆಗೆ ಇಯಾನ್ ಬಾಥಮ್ ಹೆಸರಿನಲ್ಲಿದ್ದ 22 ವಿಕೆಟ್ ಗಳ ಸಾಧನೆಯನ್ನು ಅಳಿಸಿ ಹಾಕಿದರು. ನಂತರ, ಮತ್ತೆರಡು ವಿಕೆಟ್ ಗಳನ್ನು ಕಿತ್ತ ಅಜಾಝ್ ಪಟೇಲ್, ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು.
ಜಿಮ್ ಲೇಕರ್ (1956) ಹಾಗೂ ಅನಿಲ್ ಕುಂಬ್ಳೆ (1999) ನಂತರ ಇನಿಂಗ್ಸ್ ಒಂದರಲ್ಲಿ ಎಲ್ಲ ಹತ್ತು ವಿಕೆಟ್ ಗಳನ್ನು ಕಿತ್ತ ದಾಖಲೆಯೂ ಅಜಾಝ್ ಪಟೇಲ್ ಹೆಸರಿನಲ್ಲಿದೆ.