ಮಗ ರಿಂಕು ಸಿಂಗ್ ಸ್ಟಾರ್ ಕ್ರಿಕೆಟರ್ ಆದರೂ, ಸಿಲಿಂಡರ್ ತಲುಪಿಸುವ ವೃತ್ತಿ ಬಿಡದ ಖಾನ್ಚಂದ್ರ ಸಿಂಗ್
ರಿಂಕು ತಂದೆ ಸಿಲಿಂಡರ್ ತಲುಪಿಸುತ್ತಿರುವ ವೀಡಿಯೊ ವೈರಲ್

Photo : Indiatoday.in
ಅಲಿಗಡ : ರಿಂಕ ಸಿಂಗ್ ತಂದೆಯ ಹೆಸರು ಖಾನ್ಚಂದ್ರ ಸಿಂಗ್. ವೃತ್ತಿಯಲ್ಲಿ ಸಿಲಿಂಡರ್ ತಲುಪಿಸುವ ಕೆಲಸ ಮಾಡುತ್ತಾರೆ. ಮಗ ರಿಂಕು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಸರು ಮಾಡುತ್ತಿದ್ದರೂ, ತಂದೆ ಖಾನ್ಚಂದ್ರ ಸಿಂಗ್ ತಮ್ಮ ಮೂಲ ವೃತ್ತಿಯಲ್ಲೇ ಮುಂದುವರಿದಿರುವ ವೀಡಿಯೊವೊಂದು ವೈರಲ್ ಆಗಿದೆ. ಅವರ ವೃತ್ತಿ ಶ್ರದ್ಧೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತೀಯ ತಂಡದ ಮುಂದಿನ ಮಹೇಂದ್ರ ಸಿಂಗ್ ಧೋನಿ ಎಂದೇ ಬಿಂಬಿತವಾಗಿರುವ ರಿಂಕು ಸಿಂಗ್, ಅಂಗಣದೊಳಗಿನ ತಮ್ಮ ಅಬ್ಬರದ ಆಟಕ್ಕೆ ಹೆಸರುವಾಸಿ. ಉತ್ತರಪ್ರದೇಶ ಕ್ರಿಕೆಟ್ ತಂಡದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಐಪಿಎಲ್ ನಲ್ಲಿ ಸ್ಥಾನ ಪಡೆಯುವವರೆಗೆ ರಿಂಕು ಪಟ್ಟ ಕಷ್ಟಗಳು ಬಹಳಷ್ಟು. ಸಂದರ್ಶನವೊಂದಲ್ಲಿ ಅದನ್ನೆಲ್ಲಾ ಬಿಚ್ಚಿಟ್ಟಿದ್ದ ರಿಂಕು ಸಿಂಗ್ ನೋಡುಗರ ಕಣ್ಣಂಚು ಭಾರವಾಗಿಸಿದ್ದರು.
ರಿಂಕು ಸಿಂಗ್ ತನ್ನ ತಂದೆ ಖಾನ್ಚಂದ್ರ ಸಿಂಗ್ ಗ್ಯಾಸ್ ವಿತರಕನ ಕೆಲಸ ಮಾಡುತ್ತಾರೆ ಎಂದಿದ್ದರು. ತಾವು ಹೆತ್ತವರಿಗಾಗಿ ಫ್ಲಾಟ್ ಖರೀದಿಸಿದ್ದರೂ ಅದಕ್ಕೆ ಬರಲು ಅಪ್ಪ ಅಮ್ಮ ಹಿಂದೇಟು ಹಾಕುತ್ತಿದ್ದಾರೆ, ತಮ್ಮ ಕಷ್ಟದ ದಿನಗಳ ಗುಡಿಸಲಿನ ಮನೆಯಲ್ಲೇ ಇರಲು ಇಷ್ಟಪಡುತ್ತಾರೆ ಎಂದಿದ್ದರು. ಈಗ ವೈರಲ್ ಆಗಿರುವ ವೀಡಿಯೋ ಖಾನ್ಚಂದ್ರ ಸಿಂಗ್ ರ ವೃತ್ತಿಯ ಬದ್ಧತೆಯನ್ನು ಎಲ್ಲರೆದುರು ತೆರೆದಿಟ್ಟಿದೆ.