ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿ | ವೇಳಾಪಟ್ಟಿ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯ
PC : X
ಮೆಲ್ಬರ್ನ್ : ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಆ್ಯಶಸ್ 2025-26 ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯವು ಬುಧವಾರ ಪ್ರಕಟಿಸಿದೆ.
ಬಹು ನಿರೀಕ್ಷಿತ 2025-26ರ ಸಾಲಿನ ಪುರುಷರ ಆ್ಯಶಸ್ ಸರಣಿಯು 2025ರ ನವೆಂಬರ್ 21ರಿಂದ 25ರ ತನಕ ಪರ್ತ್ನಲ್ಲಿ ಆರಂಭವಾಗಲಿದೆ. ಇದನ್ನು ವೆಸ್ಟ್ ಟೆಸ್ಟ್ ಎಂದು ಕರೆಯಲಾಗುತ್ತದೆ.
ವೆಸ್ಟ್ ಟೆಸ್ಟ್ನ ನಂತರ ಬ್ರಿಸ್ಬೇನ್ನ ಗಾಬಾದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. ಅಡಿಲೇಡ್ ಓವಲ್ನಲ್ಲಿ ಕ್ರಿಸ್ಮಸ್ ಟೆಸ್ಟ್ ನಡೆಯಲಿದೆ. ಮೆಲ್ಬರ್ನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಹಾಗೂ ಸಿಡ್ನಿಯಲ್ಲಿ ನ್ಯೂ ಇಯರ್ ಟೆಸ್ಟ್ ಪಂದ್ಯ ನಡೆಯಲಿದೆ.
►ಆ್ಯಶಸ್ 2025-26ರ ವೇಳಾಪಟ್ಟಿ
ವೆಸ್ಟ್ ಟೆಸ್ಟ್
ನವೆಂಬರ್ 21-25,2025ರಂದು ಪರ್ತ್ ಸ್ಟೇಡಿಯಮ್ನಲ್ಲಿ
ಡೇ-ನೈಟ್ ಟೆಸ್ಟ್
ಬ್ರಿಸ್ಬೇನ್ನ ಗಾಬಾದಲ್ಲಿ ಡಿಸೆಂಬರ್ 4-8,2025
ಕ್ರಿಸ್ಮಸ್ ಟೆಸ್ಟ್
ಅಡಿಲೇಡ್ನ ಅಡಿಲೇಡ್ ಓವಲ್ನಲ್ಲಿ -ಡಿಸೆಂಬರ್ 17-21,2025
ಬಾಕ್ಸಿಂಗ್ ಡೇ ಟೆಸ್ಟ್
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ -ಡಿಸೆಂಬರ್ 26-30, 2025
ನ್ಯೂ ಇಯರ್ ಟೆಸ್ಟ್
ಸಿಡ್ನಿಯಲ್ಲಿ-ಜನವರಿ 4-8, 2026