ಏಶ್ಯಕಪ್: ಭಾರತ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ
Photo: Twitter
ಪಲ್ಲೆಕಲೆ: ಏಶ್ಯಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶನಿವಾರ ಟಾಸ್ ಜಯಿಸಿರುವ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಭಾರತವು 4.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿದೆ. ಆಗ ಪಿಚ್ ಮೇಲೆ ಹೊದಿಕೆಯನ್ನು ಹಾಸಲಾಗಿದೆ.
ಈ ಪಂದ್ಯಕ್ಕೆ ಮುಹಮ್ಮದ್ ಶಮಿ ಅಲಭ್ಯರಾಗಿದ್ದು, ಅವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.
ಪ್ರಸಕ್ತ ಟೂರ್ನಮೆಂಟ್ ನಲ್ಲಿ ಭಾರತ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಪಾಕಿಸ್ತಾನವು ಈಗಾಗಲೇ ನೇಪಾಳ ವಿರುದ್ಧ ಆಡಿರುವ ಉದ್ಘಾಟನಾ ಪಂದ್ಯವನ್ನು 238 ರನ್ ಅಂತರದಿಂದ ಗೆದ್ದುಕೊಂಡಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 132 ಏಕದಿನ ಪಂದ್ಯಗಳನ್ನು ಆಡಿದ್ದು ಈ ಪೈಕಿ ಭಾರತ 55ರಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನವು 73ರಲ್ಲಿ ಗೆಲುವು ಕಂಡಿದೆ. ಏಶ್ಯಕಪ್ ನಲ್ಲಿ ಉಭಯ ತಂಡಗಳು 13 ಏಕದಿನ ಪಂದ್ಯಗಳನ್ನು ಆಡಿದ್ದು ಭಾರತ 7ರಲ್ಲಿ ಜಯ ಸಾಧಿಸಿದರೆ, ಪಾಕ್ 5 ಬಾರಿ ಗೆದ್ದಿದೆ.
Next Story