ಏಶ್ಯನ್ ಗೇಮ್ಸ್ ಕ್ರಿಕಟ್, ಪಾಕ್ ಸೋಲಿಸಿ ಫೈನಲ್ ಗೆ ಅಫಘಾನಿಸ್ತಾನ
ಚಿನ್ನಕ್ಕಾಗಿ ರವಿವಾರ ಭಾರತದ ಎದುರು ಸೆಣಸು
Photo: Afghanistan Cricket Board/Twitter
ಹಾಂಗ್ ಝೌ : ಏಶ್ಯನ್ ಗೇಮ್ಸ್ ಕ್ರೀಡಾಕೂಟದ ಟಿ-20 ಸೆಮಿ ಫೈನಲ್ ಪಂದ್ಯದಲ್ಲಿ ಗುಲ್ಬದಿನ್ ನಾಯಕತ್ವದ ಅಫ್ಘಾನಿಸ್ಥಾನ ತಂಡವು ಪಾಕಿಸ್ಥಾನದ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಅ.8ರಂದು ಫೈನಲ್ ನಲ್ಲಿ ಭಾರತ ತಂಡ ಚಿನ್ನಕ್ಕಾಗಿ ಅಫಘಾನಿಸ್ತಾನ ಎದುರು ಸೆಣಸಲಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಅಫಘಾನಿಸ್ತಾನ, ಪಾಕಿಸ್ಥಾನವನ್ನು 18 ಓವರ್ ಗಳಲ್ಲಿ 115 ಕ್ಕೆ ಆಲೌಟ್ ಮಾಡಿತು.
ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ಒಮೈರ್ ಯೂಸುಫ್ 24 ರನ್ ಗರಿಷ್ಠ ಸ್ಕೋರ್ ಆಗಿತ್ತು. ಅಫಘಾನಿಸ್ತಾನ ಬಿಗಿ ಬೌಲಿಂಗ್ ನಲ್ಲಿ ಫರೀದ್ ಅಹ್ಮದ್ 3, ಕೈಸ್ ಅಹ್ಮದ್ ಮತ್ತು ಜಹೀರ್ ಖಾನ್ ತಲಾ ಎರಡು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ಸುಲಭ ಜಯ ಸಾಧಿಸಿತು.17.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಜಯ ಸಾಧಿಸಿತು. ನೂರ್ ಅಲಿ ಜದ್ರಾನ್ 39, ನಾಯಕ ಗುಲ್ಬದಿನ್ ನೈಬ್ ಔಟಾಗದೆ 26 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.