ಏಶ್ಯನ್ ಗೇಮ್ಸ್-2023: ಶಿಖರ್ ಧವನ್ ನಾಯಕ, ವಿವಿಎಸ್ ಲಕ್ಷ್ಮಣ್ ಕೋಚ್?
ಹೊಸದಿಲ್ಲಿ: ಭಾರತದ ಆರಂಭಿಕ ಬ್ಯಾಟರ್ ಶಿಖರ್ ಧವನ್ ಏಶ್ಯನ್ ಗೇಮ್ಸ್- 2023ರಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆಯಿದೆ.
ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ರನ್ನು ಟೂರ್ನಮೆಂಟ್ನ ಮುಖ್ಯ ಕೋಚ್ ಆಗಿ ಪರಿಗಣಿಸುವ ಸಾಧ್ಯತೆಯಿದೆ.ಆದಾಗ್ಯೂ ಈ ಎಲ್ಲ ನೇಮಕದ ಕುರಿತು ಅಂತಿಮ ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಚೀನಾದಲ್ಲಿ ಸೆಪ್ಟಂಬರ್ನಲ್ಲಿ ಆರಂಭವಾಗ ಲಿರುವ ಏಶ್ಯನ್ ಗೇಮ್ಸ್ನಲ್ಲಿ ಇದೇ ಮೊದಲ ಬಾರಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳನ್ನು ಕಳುಹಿಸಿಕೊಡಲು ಬಿಸಿಸಿಐ ಸಮ್ಮತಿ ನೀಡಿದೆ. ಏಶ್ಯನ್ ಗೇಮ್ಸ್ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ವ್ಯಾಪ್ತಿಗೆ ಬರುವುದಿಲ್ಲ. ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಧಿಕೃತ ಸ್ಪರ್ಧೆಯಾಗಿ ಇದು ಗುರುತಿಸಲ್ಪಡುವುದಿಲ್ಲ ಎಂಬುದು ಗಮನಾರ್ಹ ವಿಚಾರ.
ಏಶ್ಯಕಪ್ ಹಾಗೂ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಂತಹ ಇತರ ಕ್ರಿಕೆಟ್ ಇವೆಂಟ್ ನಡೆ ಯುವ ಸಂದರ್ಭದಲ್ಲಿಯೇ ಏಶ್ಯನ್ ಗೇಮ್ಸ್ ನಡೆಯುತ್ತಿರುವ ಕಾರಣ ವೇಳಾಪಟ್ಟಿಯಲ್ಲಿ ಘರ್ಷಣೆಯಾಗುವ ಸಾಧ್ಯತೆಯಿದೆ.
ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 23ರ ತನಕ ನಡೆಯಲಿದೆ. ಚೀನಾದ ಹಾಂಗ್ಝೌನಲ್ಲಿ ಏಶ್ಯನ್ ಗೇಮ್ಸ್ ಸೆ.23ರಿಂದ ಅ.8ರ ತನಕ ನಿಗದಿಯಾಗಿದೆ.
ಮತ್ತೊಂದೆಡೆ ದೇಶಿಯ ಕ್ರಿಕೆಟ್ ಹೊರತುಪ ಡಿಸಿ ಭಾರತದ ಮಹಿಳಾ ಕ್ರಿಕೆಟ್ ತಂಡ ಸೆಪ್ಟಂಬರ್ ನಲ್ಲಿ ಯಾವುದೇ ಟೂರ್ನಿಯಲ್ಲಿ ಭಾಗವಹಿಸು ತ್ತಿಲ್ಲ. ಭಾರತದ ಮಹಿಳಾ ಕ್ರಿಕೆಟ್ ತಂಡ ಈ ಹಿಂದೆ 2022ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗವಹಿ ಸಿತ್ತು.