ಗುರುವಾರದಿಂದ ಚೆನ್ನೈನಲ್ಲಿ ಏಶ್ಯನ್ ಹಾಕಿ ಚಾಂಪಿಯನ್ ಟ್ರೋಫಿ ಆರಂಭ
Photo: PTI
ಚೆನ್ನೈ: ಏಶ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಹಾಕಿ ಟೂರ್ನಿಯು ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಮ್ನಲ್ಲಿ ಗುರುವಾರ ಆರಂಭವಾಗಲಿದೆ. ಟೂರ್ನಮೆಂಟ್ನಲ್ಲಿ ಏಶ್ಯದ 6 ಶ್ರೇಷ್ಠ ತಂಡಗಳಾದ ಭಾರತ, ಪಾಕಿಸ್ತಾನ, ಜಪಾನ್, ಚೀನಾ, ಮಲೇಶ್ಯ ಹಾಗೂ ದಕ್ಷಿಣ ಕೊರಿಯಾ ಭಾಗವಹಿಸಲಿವೆ.
ತಲಾ 3 ಬಾರಿ ಪ್ರಶಸ್ತಿಗಳನ್ನು ಜಯಿಸಿರುವ ಭಾರತ ಹಾಗೂ ಪಾಕಿಸ್ತಾನ ಅತ್ಯಂತ ಯಶಸ್ವಿ ತಂಡಗಳಾಗಿವೆ.
ದಕ್ಷಿಣ ಕೊರಿಯಾ ಹಾಲಿ ಚಾಂಪಿಯನ್ ಆಗಿದ್ದು, ಕಳೆದ ಬಾರಿಯ ರನ್ನರ್ಸ್ ಅಪ್ ಜಪಾನ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಬಾರಿ ಭಾರತ ಇಲ್ಲವೇ ಪಾಕ್ ತಂಡಗಳು ಫೈನಲ್ಗೆ ತಲುಪುವಲ್ಲಿ ವಿಫಲವಾಗಿದ್ದವು. ಈ ಎರಡು ತಂಡಗಳು ಕ್ರಮವಾಗಿ ದ.ಕೊರಿಯ ಹಾಗೂ ಜಪಾನ್ ವಿರುದ್ಧ ಸೆಮಿ ಫೈನಲ್ನಲ್ಲಿ ಸೋತಿದ್ದವು.
ಈ ಬಾರಿ ಭಾರತ-ಪಾಕಿಸ್ತಾನ ಆ.9ರಂದು ಮುಖಾಮುಖಿಯಾಗಲಿವೆ.
Next Story