ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್ | ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ಚಾಂಪಿಯನ್
ಅಲೆಕ್ಸಿ ಪೋಪಿರಿನ್ | PC : X
ಮಾಂಟ್ರಿಯಲ್ : ಆಂಡ್ರೆ ರುಬ್ಲೇವ್ ರನ್ನು ನೇರ ಸೆಟ್ಗಳಿಂದ ಸೋಲಿಸಿದ ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಟೆನಿಸ್ ವೃತ್ತಿಜೀವನದಲ್ಲಿ ಮಹತ್ವದ ಜಯ ದಾಖಲಿಸಿದರು.
ವಿಶ್ವದ ನಂ.62ನೇ ಆಟಗಾರ ಪೋಪಿರಿನ್ ಕೇವಲ 90 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.6ನೇ ಆಟಗಾರ ರುಬ್ಲೇವ್ರನ್ನು 6-2, 6-4 ಅಂತರದಿಂದ ಮಣಿಸಿ ಪ್ರತಿಷ್ಠಿತ ಮಾಸ್ಟರ್ಸ್-1000 ಪ್ರಶಸ್ತಿ ಜಯಿಸಿದರು.
ಈ ಗೆಲುವಿನ ಮೂಲಕ ಪೋಪಿರನ್ 2003ರ ನಂತರ ಮಾಸ್ಟರ್ಸ್-1000 ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ ಎನಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದರು. 2003ರಲ್ಲಿ ಲೆಟನ್ ಹೆವಿಟ್ ಇಂಡಿಯನ್ ವೆಲ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
25ರ ಹರೆಯದ ಪೋಪಿರನ್ ಅವರು ಪ್ಯಾಟ್ರಿಕ್ ರಾಫ್ಟರ್, ಮಾರ್ಕ್ ಫಿಲಿಪೋಸಿಸ್ ಹಾಗೂ ಹೆವಿಟ್ ಅವರನ್ನೊಳಗೊಂಡ ಎಲೈಟ್ ಕ್ಲಬ್ ಗೆ ಸೇರ್ಪಡೆಯಾದರು.
Next Story