ಭಾರತ ವಿರುದ್ಧ ಆಸ್ಟ್ರೇಲಿಯಾ 2 ವಿಕೆಟ್ ಗೆ 83
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯ
Photo:PTI
ಚೆನ್ನೈ: ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ.
2.2 ಓವರ್ ಗಳಲ್ಲಿ 5 ರನ್ ಗಳಿಸಿದ್ದಾಗ ಆಸ್ಟ್ರೇಲಿಯಾದ ಮಿಷೆಲ್ ಮಾರ್ಶ್ 6 ಎಸೆತ ಎದುರಿಸಿ ಶೂನ್ಯಕ್ಕೆ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ 52 ಎಸೆತಗಳಲ್ಲಿ 41 ರನ್ ಗಳಿಸಿ 16.3 ಓವರ್ ನಲ್ಲಿ ಕುಲ್ ದೀಪ್ ಯಾದವ್ ಅವರಿಗೆ ಕಾಟ್ ಆಂಡ್ ಬೌಲ್ಡ್ ಆದರು. ಈಗ ಆಸ್ಟ್ರೇಲಿಯಾ 19.3 ಓವರ್ ಗಳಲ್ಲಿ 83 ರನ್ ಗಳಿಸಿದೆ.
Next Story