ಆಸ್ಟ್ರೇಲಿಯಾ-ಶ್ರೀಲಂಕಾ ಪಂದ್ಯದ ವೇಳೆ ಭಾರೀ ಬಿರುಗಾಳಿ: ಪ್ರೇಕ್ಷಕರ ಆಸನಗಳ ಮೇಲೆ ಬಿದ್ದ ಜಾಹಿರಾತು ಫಲಕ
ಇಂತಹ ಘಟನೆಯನ್ನು ನಾನೆಂದೂ ನೋಡಿಲ್ಲ ಎಂದ ಆಸ್ಟ್ರೇಲಿಯಾ ಆಟಗಾರ
Photo:X
ಲಕ್ನೊ: ಸೋಮವಾರ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಭಾರಿ ಬಿರುಗಾಳಿ ಬೀಸಿದ್ದರಿಂದ ಏಕನಾ ಕ್ರೀಡಾಂಗಣದ ಮೇಲಿಂದ ಜಾಹೀರಾತು ಫಲಕಗಳು ಕೆಳಗಿದ್ದ ಆಸನಗಳ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಮಳೆಯಿಂದ ಪಂದ್ಯಕ್ಕೆ ಕೆಲಕಾಲ ಅಡಚಣೆ ಉಂಟಾದ ನಂತರ, ಸುಂಟರಗಾಳಿ ಹಾಗೂ ಭಾರಿ ಬಿರುಗಾಳಿ ಬೀಸಿ, ಕ್ರೀಡಾಂಗಣದ ಮೇಲೆ ಸ್ಥಾಪಿಸಲಾಗಿದ್ದ ಜಾಹೀರಾತು ಫಲಕಗಳು ಕೆಳಗೆ ಆಸನದಲ್ಲಿ ಕುಳಿತಿದ್ದ ಪ್ರೇಕ್ಷಕರ ಮೇಲೆ ಬಿದ್ದವು ಎಂದು ndtv.com ವರದಿ ಮಾಡಿದೆ.
ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರಿಲ್ಲದೆ ಇದ್ದುದರಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಜರುಗಿಲ್ಲ. ಆದರೆ, ಕೆಳಗಿನ ಆಸನಗಳಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಮೇಲಿನ ಆಸನಗಳಿಗೆ ತೆರಳಬೇಕು ಎಂದು ಸೂಚಿಸಲಾಯಿತು.
ಪಂದ್ಯ ಮುಕ್ತಾಯಗೊಂಡ ನಂತರ ಈ ಕುರಿತು ಆಸ್ಟ್ರೇಲಿಯಾ ತಂಡದ ತಾರಾ ಆಟಗಾರ ಆ್ಯಡಮ್ ಝಂಪಾರನ್ನು ಪ್ರಶ್ನಿಸಿದಾಗ, “ಇಂತಹ ಘಟನೆಯನ್ನು ನಾನೆಂದೂ ನೋಡಿಲ್ಲ. ಆದರೆ, ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಕ್ರೀಡಾಂಗಣದ ಮೇಲಿಂದ ಲೋಹದ ಕಂಬವೊಂದು ಬಾಗುತ್ತಿತ್ತು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಎರಡನೆ ಇನಿಂಗ್ಸ್ ಪ್ರಾರಂಭಕ್ಕೂ ಮುನ್ನ ಭದ್ರತಾ ಸಿಬ್ಬಂದಿಗಳು ಪ್ರೇಕ್ಷಕರನ್ನು ಮೇಲಿನ ಆಸನಗಳಿಗೆ ಸ್ಥಳಾಂತರಿಸಿದರು.
Due to strong winds, hoardings are falling all over Lucknow's Ekana Stadium.
— Ali Taabish Nomani (@atnomani) October 16, 2023
Spectators running for safety.#CWC23 #AUSvSL #WorldCup2023 #Lucknow @BCCI @ICC pls remove these banners before the next match. pic.twitter.com/xxoqK775jK
#AUSvSL stadium going apart in lucknow by wind only pic.twitter.com/fr3YrDCdvc
— Darksideraza (@Darksiderazaa) October 16, 2023