ಭಾರತಕ್ಕೆ 257 ರನ್ ಗುರಿ ನೀಡಿದ ಬಾಂಗ್ಲಾ
ತಂಝೀದ್ ಅಹ್ಮದ್,ಲಿಟನ್ ದಾಸ್ ಅರ್ಧಶತಕ
PHOTO : Cricketworldcup.com
ಪುಣೆ:ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯ ಭಾರತ ಗೆಲುವಿಗೆ 257 ರನ್ ಬಾಂಗ್ಲಾದೇಶ ಗುರಿ ನೀಡಿತು.
ಟೂರ್ನಿಯ ಮೊದಲ ಪಂದ್ಯ ಆಯೋಜನೆಯಾಗುತ್ತಿರುವ ಪುಣೆಯ ಕ್ರಿಕೆಟ್ ಸ್ಟೇಡಿಯಂ ಭಾರತೀಯ ಬೌಲರ್ ಶಿಸ್ತಬದ್ದ ದಾಳಿಯ ನಡುವೆಯೂ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 256 ರನ್ ಬಾರಿಸಿದೆ.
ಬಾಂಗ್ಲಾ ನಾಯಕ ಶಾಕಿಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ಹುಸೈನ್ ಶಾಂಟೋ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಬಂದ ಬಾಂಗ್ಲಾ ಬ್ಯಾಟರ್ಸ್ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿ ಪರಸ್ಪರ ಅರ್ಧಶಕ ಬಾರಿಸಿದರು. ತಂಝೀದ್ ಅಹ್ಮದ್ 51 ಬಾರಿಸಿ ಕುಲದೀಪ್ ಯಾದವ್ ಗೆ ಎಲ್ ಬಿಡಬ್ಲೂ ಆಗುದರೊಂದಿಗೆ ಬಾಂಗ್ಲಾ ಮೊದಲ ವಿಕೆಟ್ ಕಳೆದುಕೊಡಿತು. ಲಿಟನ್ ದಾಸ್ 7 ಬೌಂಡರಿ ಸಹಿತ 66ರನ್ ಬಾರಿದರು. ಬಳಿಕ ಬ್ಯಾಟ್ ಬೀಸಿದ ನಾಯಕ ಹುಸೈನ್ ಶಾಂಟೋ 8 ರನ್ ಗೆ ಜಡೇಜಾ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆದರೆ ಮೆಹದಿ ಹಸನ್ 3 ರನ್ ಗೆ ಸಿರಾಜ್ ಗೆ ವಿಕೆಟ್ ಒಪ್ಪಿದರು.
ತೌಹೀದ್ ಹೃದೊಯ್ 16 ರನ್ ಗೆ ಬಾರಿಸಿ ಶಾರ್ದೂಲ್ ಬೌಲಿಂಗ್ ನಲ್ಲಿ ಔಟ್ ಆದರು. ಭಾರತೀಯ ಬೌಲರ್ ಗಳ ಲಯ ಅರಿತು ಬ್ಯಾಟ್ ಬೀಸುತ್ತಿದ್ದ ಮುಷ್ಫಿಕುರ್ ರಹೀಂ 38 ರನ್ ಗಳಿಸಿರುವಾಗ ಬೂಮ್ರ ಓವರ್ ನಲ್ಲಿ ವಿಕೆಟ್ ಕಳೆದುಕೊಂಡರು. ಜವಬ್ದಾರಿಯುತ ಬ್ಯಾಟ್ ಮಾಡಿದ ಮಾಜಿ ನಾಯಕ ಮಹಮದುಲ್ಲ 46 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿ, ವಿಕೆಟ್ ಒಪ್ಪಿಸಿದರು. ಮುಸ್ತಫಿಝುರ್ರಹ್ಮಾನ್ 1 ರನ್, ಶರೀಫುಲ್ ಇಸ್ಲಾಂ 7 ರನ್ ಗಳಿಸಿದರು.
ಭಾರತದ ಪರ ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್, ಶಾರ್ದುಲ್ ಠಾಕೂರ್ 1 ವಿಕೆಟ್ ಪಡೆದರು.