ರಿಯಲ್ ಮ್ಯಾಡ್ರಿಡ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸ್ಪ್ಯಾನಿಷ್ ಸೂಪರ್ ಕಪ್ ಗೆದ್ದ ಬಾರ್ಸಿಲೋನಾ ಎಫ್ ಸಿ
PC: x.com/cloudninesports
ದುಬೈ: ಸೌದಿ ಅರೇಬಿಯಾದಲ್ಲಿ ರವಿವಾರ ನಡೆದ ವೈಲ್ಡ್ ಸ್ಪ್ಯಾನಿಷ್ ಸೂಪರ್ ಕಪ್ ಫೈನಲ್ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ವಿರುದ್ಧ 5-2 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪ್ರಶಸ್ತಿ ಗೆದ್ದಿದೆ. ಇದು ಕೋಚ್ ಹನ್ಸಿ ಫ್ಲಿಕ್ ಅವರ ಅವಧಿಯಲ್ಲಿ ಗೆದ್ದ ಚೊಚ್ಚಲ ಪ್ರಶಸ್ತಿಯಾಗಿದೆ.
ರಫೀನ್ಹಾ ಎರಡು ಗೋಲು ಗಳಿಸಿದರೆ, ರಾಬರ್ಟ್ ಲೆವಾಂಡೊಸ್ಕಿ, ಅಲೆಜೆಂಡ್ರೊ ಬಾಲ್ಡ್ ಮತ್ತು ಲ್ಯಾಮಿನ್ ಯಮಲ್ ತಲಾ ಒಂದು ಗೋಲುಗಳ ಕೊಡುಗೆ ನೀಡಿದರು. ರಿಯಲ್ ಮ್ಯಾಡ್ರಿಡ್ ಪರ ಕೈಲಿಯನ್ ಎಂಬಾಪೆ ಮತ್ತು ರೋಡ್ರಿಗೊ ಗೋಲು ಬಾರಿಸಿದರು. ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ಲಾ ಸ್ಪೋರ್ಟ್ಸ್ ಸಿಟಿಯಲ್ಲಿ ಈ ಫೈನಲ್ ಪಂದ್ಯ ನಡೆಯಿತು.
ಆರಂಭದಲ್ಲೇ ಗೋಲು ಗಳಿಸಿದ ಎಂಬಾಪೆ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಪಂದ್ಯದುದ್ದಕ್ಕೂ ಚೇತೋಹಾರಿ ಪ್ರದರ್ಶನ ನೀಡಿದ ಬಾರ್ಸಿಲೋನಾ ಆಟಗಾರರು ಪ್ರತಿಯಾಗಿ ಐದು ಗೋಲುಗಳನ್ನು ಸಿಡಿಸುವ ಮೂಲಕ ಪ್ರಾಬಲ್ಯ ಮೆರೆದರು.