ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಉದ್ಘಾಟಿಸಿದ ಬಿಸಿಸಿಐ
PC : PTI
ಹೊಸದಿಲ್ಲಿ : ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಬೆಂಗಳೂರಿನಲ್ಲಿ ರವಿವಾರ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಯನ್ನು ಉದ್ಘಾಟಿಸಿದೆ.
2000ರಲ್ಲಿ ಸ್ಥಾಪನೆಯಾಗಿದ್ದ ಎನ್ಸಿಎ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಇದೀಗ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 40 ಎಕ್ರೆ ಜಾಗದಲ್ಲಿ ತಲೆ ಎತ್ತಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್(ಸಿಒಇ) ಎಂದು ಕರೆಯಲ್ಪಡುತ್ತಿರುವ ಎನ್ಸಿಎಯಲ್ಲಿ ಮೂರು ವಿಶ್ವ ದರ್ಜೆಯ ಮೈದಾನಗಳು, 86 ಪಿಚ್ಗಳು ಇದ್ದು, ಇದರಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಸೇರಿವೆ. ಇದು ಸಮಗ್ರ ತರಬೇತಿ ವ್ಯವಸ್ಥೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಮೂರು ಮೈದಾನಗಳನ್ನು ವೈಟ್ ಪಿಕೆಟ್ ಫೆನ್ಸಿಂಗ್ ಹಾಗೂ ಹಸಿರು ಆಸನ ದಿಬ್ಬದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಇಂಗ್ಲಿಷ್ ಕೌಂಟಿ ಮೈದಾನವನ್ನು ನೆನಪಿಸುತ್ತದೆ.
Next Story