ಬಾಂಗ್ಲಾದೇಶ, ಇಂಗ್ಲೆಂಡ್ ವಿರುದ್ಧದ ಸ್ವದೇಶಿ ಸರಣಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
PC : BCCI
ಹೊಸದಿಲ್ಲಿ : ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧ ಅನುಕ್ರಮವಾಗಿ ಸೆಪ್ಟಂಬರ್-ಅಕ್ಟೋಬರ್ ಹಾಗೂ 2025ರ ಜನವರಿ-ಫೆಬ್ರವರಿಯಲ್ಲಿ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಹಾಗೂ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.
ಅಕ್ಟೋಬರ್ 6ರಂದು ನಿಗದಿಯಾಗಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವನ್ನು ಧರ್ಮಶಾಲಾದಿಂದ ಗ್ವಾಲಿಯರ್ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ತನ್ನ ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರಕಟಿಸಿದೆ.
ಧರ್ಮಶಾಲಾದ ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಶನ್(ಎಚ್ಪಿಸಿಎ)ಕ್ರೀಡಾಂಗಣದ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು ಡ್ರೆಸ್ಸಿಂಗ್ ರೋಮ್ಗಳನ್ನು ನವೀಕರಣ ಮಾಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಗ್ವಾಲಿಯರ್ನಲ್ಲಿ ನೂತನ ಕ್ರೀಡಾಂಗಣವಾದ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಮೊದಲ ಟಿ20 ಪಂದ್ಯವು ನಡೆಯಲಿದೆ. 2010ರಲ್ಲಿ ಸಚಿನ್ ತೆಂಡುಲ್ಕರ್ ಐತಿಹಾಸಿಕ ಭಾರತದ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ ನಂತರ ಗ್ವಾಲಿಯರ್ ನಗರದಲ್ಲಿ ಮೊದಲ ಬಾರಿ ಪಂದ್ಯ ಆಯೋಜಿಸಲಾಗುತ್ತಿದೆ.
2025ರ ಜನವರಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿರುವ ಮೊದಲೆರಡು ಟಿ20 ಪಂದ್ಯಗಳ ಸ್ಥಳಗಳನ್ನು ಅದಲು-ಬದಲು ಮಾಡಲಾಗಿದೆ. ಜನವರಿ 22ರಂದು ನಿಗದಿಯಾಗಿರುವ ಮೊದಲ ಟಿ20 ಚೆನ್ನೈ ಬದಲಿಗೆ ಕೋಲ್ಕತಾದಲ್ಲಿ ನಡೆಯಲಿದೆ. ಜನವರಿ 25ರಂದು ನಡೆಯಲಿರುವ 2ನೇ ಟಿ20ಗೆ ಚೆನ್ನೈ ಆತಿಥ್ಯವಹಿಸಲಿದೆ.
ಗಣರಾಜ್ಯೋತ್ಸವದ ಹಿಂದಿನ ಬದ್ಧತೆಗಳು ಹಾಗೂ ಕಟ್ಟುಪಾಡುಗಳ ಬಗ್ಗೆ ಕೋಲ್ಕತಾ ಪೊಲೀಸರಿಂದ ಬಂಗಾಳದ ಕ್ರಿಕೆಟ್ ಸಂಸ್ಥೆಗೆ ಕೋರಿಕೆ ಬಂದ ಮೇರೆಗೆ ಸ್ಥಳ ಬದಲಾವಣೆ ಅಗತ್ಯವಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಬಾಂಗ್ಲಾದೇಶದ ಭಾರತ ಪ್ರವಾಸ
ಸೆಪ್ಟಂಬರ್ 19: ಭಾರತ-ಬಾಂಗ್ಲಾದೇಶ-ಮೊದಲ ಟೆಸ್ಟ್-ಚೆನ್ನೈ(ಬೆಳಗ್ಗೆ 9:30)
ಸೆಪ್ಟಂಬರ್ 27: ಭಾರತ-ಬಾಂಗ್ಲಾದೇಶ-ದ್ವಿತೀಯ ಟೆಸ್ಟ್-ಕಾನ್ಪುರ(ಬೆಳಗ್ಗೆ 9:30)
ಅಕ್ಟೋಬರ್ 6: ಭಾರತ-ಬಾಂಗ್ಲಾದೇಶ-ಮೊದಲ ಟಿ20-ಗ್ವಾಲಿಯರ್(ಸಂಜೆ 7:00)
ಅಕ್ಟೋಬರ್ 9: ಭಾರತ-ಬಾಂಗ್ಲಾದೇಶ-2ನೇ ಟಿ20-ಹೊಸದಿಲ್ಲಿ(ಸಂಜೆ 7:00)
ಅಕ್ಟೋಬರ್ 12: ಭಾರತ-ಬಾಂಗ್ಲಾದೇಶ-3ನೇ ಟಿ20- ಹೈದರಾಬಾದ್(ಸಂಜೆ 7:00)
ಭಾರತಕ್ಕೆ ಇಂಗ್ಲೆಂಡ್ ಪ್ರವಾಸ
ಜನವರಿ 22-ಭಾರತ-ಇಂಗ್ಲೆಂಡ್-ಮೊದಲ ಟಿ20-ಕೋಲ್ಕತಾ(ಸಂಜೆ 7:00)
ಜನವರಿ 25-ಭಾರತ-ಇಂಗ್ಲೆಂಡ್-ಎರಡನೇ ಟಿ20-ಚೆನ್ನೈ(ಸಂಜೆ 7:00)
ಜನವರಿ 28: ಭಾರತ-ಇಂಗ್ಲೆಂಡ್-ಮೂರನೇ ಟಿ20-ರಾಜ್ಕೋಟ್(ಸಂಜೆ 7:00)
ಜನವರಿ 31-ಭಾರತ-ಇಂಗ್ಲೆಂಡ್ -ನಾಲ್ಕನೇ ಟಿ20-ಪುಣೆ(ಸಂಜೆ 7-00)
ಫೆಬ್ರವರಿ 2-ಭಾರತ-ಇಂಗ್ಲೆಂಡ್-ಐದನೇ ಟಿ20-ಮುಂಬೈ(ಸಂಜೆ 7:00)