ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತೀಯ ಅತ್ಲೀಟ್ ಗಳಿಗೆ 8.5 ಕೋಟಿ ರೂ.: ಬಿಸಿಸಿಐ
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಭಾರತೀಯ ಅತ್ಲೀಟ್ ಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ)ಗೆ 8.5 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರವಿವಾರ ಘೋಷಿಸಿದೆ.
‘‘ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನಮ್ಮ ಅಸಾಮಾನ್ಯ ಅತ್ಲೀಟ್ ಗಳಿಗೆ ಬಿಸಿಸಿಐ ಬೆಂಬಲ ನೀಡುತ್ತದೆ ಎನ್ನುವುದನ್ನು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಭಾರತೀಯ ಒಲಿಂಪಿಕ್ ಅಭಿಯಾನಕ್ಕಾಗಿ ನಾವು 8.5 ಕೋಟಿ ರೂ. ಒದಗಿಸುತ್ತೇವೆ. ನಮ್ಮ ಇಡೀ ತಂಡಕ್ಕೆ ನಾವು ಶುಭ ಕೋರುತ್ತೇವೆ. ಭಾರತ ಹೆಮ್ಮೆ ಪಡುವಂತೆ ಮಾಡಿ! ಜೈ ಹಿಂದ್!’’ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.
Next Story