ಲಾಹೋರ್: ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

PC : X
ಲಾಹೋರ್ : ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ನ್ಯೂಝಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯವನ್ನು ವೀಕ್ಷಿಸಿದರು.
ಪಾಕಿಸ್ತಾನದಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜತಾಂತ್ರಿಕ ಉದ್ವಿಗ್ನತೆ ಉಂಟಾಗಿರುವ ನಡುವೆ ಈ ಮಹತ್ವದ ಪಂದ್ಯದಲ್ಲಿ ಶುಕ್ಲಾ ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆದಿದೆ.
ನಾಕೌಟ್ ಪಂದ್ಯದಲ್ಲಿ ವಿವಿಧ ಕ್ರಿಕೆಟ್ ಮಂಡಳಿಗಳ ಐವರು ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ರಾಜೀವ್ ಶುಕ್ಲಾ(ಬಿಸಿಸಿಐ), ರೋಜರ್ ಟೋಸ್(ನ್ಯೂಝಿಲ್ಯಾಂಡ್), ಫಾರೂಕ್ ಅಹ್ಮದ್(ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಹಾಗೂ ದಕ್ಷಿಣ ಆಫ್ರಿಕಾದ ಫೋಲೆಟ್ಸಿ ಐಸಾಕ್ ಮೊಸೆಕಿ ಹಾಗೂ ಡಾ. ಮುಹಮ್ಮದ್ ಮುಸಾಜೀ ಉಪಸ್ಥಿತರಿದ್ದರು.
ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಜೊತೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್ ಪಂದ್ಯವನ್ನು ಗದ್ದಾಫಿ ಸ್ಟೇಡಿಯಮ್ನಲ್ಲಿ ವೀಕ್ಷಿಸಿದರು. ಬಾಂಗ್ಲಾದೇಶ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ ಹಾಗೂ ಝಿಂಬಾಬ್ವೆ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕೂಡ ನ್ಯೂಝಿಲ್ಯಾಂಡ್-ದಕ್ಷಿಣ ಆಫ್ರಿಕಾ ಪಂದ್ಯವನ್ನು ವೀಕ್ಷಿಸಿದರು ಎಂದು ಪಿಸಿಬಿ ಎಕ್ಸ್ನಲ್ಲಿ ತಿಳಿಸಿದೆ.
ಭಾರತ ಸರಕಾರದ ನಿರ್ದೇಶನವನ್ನು ಉಲ್ಲೇಖಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಕಳುಹಿಸಿಕೊಡಲು ಬಿಸಿಸಿಐ ಈಹಿಂದೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ಲಾ ಅವರ ಉಪಸ್ಥಿತಿ ವಿಶೇಷ ಮಹತ್ವ ಪಡೆದಿದೆ.
PCB Chairman Mohsin Naqvi attends the ICC #ChampionsTrophy semi-final at Gaddafi Stadium alongside BCCI Vice-President Rajeev Shukla. Officials from Bangladesh, New Zealand, South Africa and Zimbabwe cricket boards are also watching the #NZvSA match. pic.twitter.com/NxijhIoYvG
— PCB Media (@TheRealPCBMedia) March 5, 2025