ವಿನೋದ್ ಕಾಂಬ್ಳಿ ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತ : ವೈದ್ಯರ ವಿವರಣೆ
ಜೀವನ ಪರ್ಯಂತ ಚಿಕಿತ್ಸೆ ನೀಡಲು ಆಸ್ಪತ್ರೆಯ ಉಸ್ತುವಾರಿ ಸಿಂಗ್ ನಿರ್ಧಾರ
ವಿನೋದ್ ಕಾಂಬ್ಳಿ | PC : X \ @vinodkambli349
ಮುಂಬೈ : ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
ಅವರನ್ನು ಸೋಮವಾರ ಮುಂಬೈಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ಕಾಂಬ್ಳಿಯ ಆರೋಗ್ಯ ಹದಗೆಟ್ಟಿತ್ತು. ಅವರಲ್ಲಿ ಮೂತ್ರದ ಸೋಂಕು ಮತ್ತು ಸೆಳೆತ ಕಾಣಿಸಿಕೊಂಡಿತ್ತು.
ಪರೀಕ್ಷೆಗೊಳಪಡಿಸಿದ ಬಳಿಕ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ವಿವೇಕ್ ತ್ರಿವೇದಿ ಹೇಳಿದ್ದಾರೆ.
ಕಾಂಬ್ಳಿಗೆ ಈ ಆಸ್ಪತ್ರೆಯಲ್ಲಿ ಜೀವನಪರ್ಯಂತ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆಯ ಉಸ್ತುವಾರಿ ಎಸ್. ಸಿಂಗ್ ನಿರ್ಧರಿಸಿದ್ದಾರೆ ಎಂದು ತ್ರಿವೇದಿ ಘೋಷಿಸಿದರು.
52 ವರ್ಷದ ಕ್ರಿಕೆಟಿಗನನ್ನು ಅವರ ಅಭಿಮಾನಿಯೊಬ್ಬರು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರು ಈ ಹಿಂದೆಯೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರು 2013ರಲ್ಲಿ ಎರಡು ಹೃದಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಅವುಗಳ ವೆಚ್ಚವನ್ನು ಸಚಿನ್ ತೆಂಡುಲ್ಕರ್ ಭರಿಸಿದ್ದರು ಎನ್ನಲಾಗಿದೆ.