ಸತತ ಎರಡನೇ ಬಾರಿ ಬೊನ್ಮತಿಗೆ ಮಹಿಳೆಯರ ಬ್ಯಾಲನ್ ಡಿ ಒರ್ ಪ್ರಶಸ್ತಿ
PC : PTI
ಪ್ಯಾರಿಸ್ : ಬಾರ್ಸಿಲೋನ ಹಾಗೂ ಸ್ಪೇನ್ನ ಸ್ಟಾರ್ ಆಟಗಾರ್ತಿ ಐತಾನಾ ಬೊನ್ಮತಿ ಸತತ ಎರಡನೇ ಬಾರಿ ಮಹಿಳೆಯರ ಬ್ಯಾಲನ್ ಡಿ ಒರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಬಾರ್ಸಿಲೋನ ತಂಡವು ಐತಿಹಾಸಿಕ ಕಾಂಟಿನೆಂಟಲ್ ಪ್ರಶಸ್ತಿ ಹಾಗೂ ಸ್ಪೇನ್ ತಂಡವು ನೇಶನ್ಸ್ ಲೀಗ್ ಗೆಲ್ಲುವಲ್ಲಿ ಬೊನ್ಮತಿ ಅವರು ಪ್ರಮುಖ ಪಾತ್ರವಹಿಸಿದ್ದರು.
26ರ ಹರೆಯದ ಬೊನ್ಮತಿ 2ನೇ ಬಾರಿ ಪ್ರಶಸ್ತಿ ಜಯಿಸಿ ಸಹ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದನ್ನು ಏಕಾಂಗಿಯಾಗಿ ಸಾಧಿಸಲು ಸಾಧ್ಯವಿಲ್ಲ. ಪ್ರತಿದಿನವೂ ನಾನು ಆಟಗಾರ್ತಿಯರಿಂದ ಸುತ್ತುವರೆದಿರುವುದು ನನ್ನ ಅದೃಷ್ಟ. ಕ್ಲಬ್ನ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುವೆ. ಅವರಿಲ್ಲದಿದ್ದರೆ ನಾವು ಇಷ್ಟೊಂದು ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಬೊನ್ಮತಿ ಹೇಳಿದ್ದಾರೆ.
Next Story