ಟಿ20 ಭಾರತ-ಪಾಕ್ ಪಂದ್ಯ ನಡೆದ ನ್ಯೂಯಾರ್ಕ್ ಸ್ಟೇಡಿಯಂನೆದುರು ಆಗಮಿಸಿದ ಬುಲ್ಡೋಝರ್ಗಳು!
Photo: x/@wokyahotahai
ನ್ಯೂಯಾರ್ಕ್: ಟಿ20 ವಿಶ್ವ ಕಪ್ ಅಂಗವಾಗಿ ಭಾರತ ಮತ್ತು ಪಾಕ್ ತಂಡಗಳ ನಡುವಿನ ಪಂದ್ಯ ಸಹಿತ ಎಂಟು ಪಂದ್ಯಗಳಿಗೆ ಸಾಕ್ಷಿಯಾದ ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿರುವ ಈಸನ್ಹೌರ್ ಪಾರ್ಕ್ನಲ್ಲಿರುವ ತಾತ್ಕಾಲಿಕ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನ ವಿವಿಧ ಭಾಗಗಳನ್ನು ಶುಕ್ರವಾರ ಕಳಚಲಾಗುವುದು.
ಕೇವಲ ಐದು ತಿಂಗಳ ಹಿಂದೆ ನಿರ್ಮಾಣವಾದ ಈ ತಾತ್ಕಾಲಿಕ ಸ್ಟೇಡಿಯಂನಲ್ಲಿ ಬುಧವಾರ ಭಾರತ ಮತ್ತು ಯುಎಸ್ಎ ತಂಡಗಳ ನಡುವಿನ ಪಂದ್ಯ ಇಲ್ಲಿನ ಕೊನೆಯ ಪಂದ್ಯವಾಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಈ ಸ್ಟೇಡಿಯಂ ಹೊರಗಡೆ ಬುಲ್ಡೋಝರ್ಗಳು ನಿಂತಿರುವುದು ಕಾಣಿಸುತ್ತದೆ.
ಸ್ಟೇಡಿಯಂನ ಮಾಡ್ಯುಲರ್ ಭಾಗಗಳನ್ನು ಕಳಚಿ ಬೇರೆ ಉದ್ದೇಶಗಳಿಗೆ ಬಳಸಲಾಗುವುದು. ಆದರೂ ಸ್ಥಳೀಯ ಕ್ರಿಕೆಟ್ ಕ್ಲಬ್ಗಳು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಈ ಮೈದಾನದ ಟಾಪ್-ಟೈರ್ ಟರ್ಫ್ ಮತ್ತು ಇತರ ಸೌಕರ್ಯಗಳು ಲಭ್ಯವಾಗಲಿವೆ.
ಈ ಸ್ಟೇಡಿಯಂ ಸ್ಥಳೀಯವಾಗಿ ಕ್ರಿಕೆಟ್ ಆಟದ ಪ್ರೋತ್ಸಾಹವನ್ನು ಮುಂದುವರಿಸಿ ಸ್ಥಳೀಯ ಪ್ರತಿಭೆಗಳಿಗೆ ಒಂದು ವೇದಿಕೆ ಒದಗಿಸಲಿದೆ.