ವೇಗವಾಗಿ 150 ಟೆಸ್ಟ್ ವಿಕೆಟ್ ಪೂರೈಸಿದ ಭಾರತದ ವೇಗಿ ಬುಮ್ರಾ
ಜಸ್ಪ್ರೀತ್ ಬುಮ್ರಾ | Photo: PTI
ವಿಶಾಖಪಟ್ಟಣಂ : ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ 150 ವಿಕೆಟ್ ಗಳನ್ನು ಪೂರೈಸಿದ ಭಾರತದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಮ್ರಾ 34ನೇ ಟೆಸ್ಟ್ ಪಂದ್ಯದಲ್ಲಿ 150 ವಿಕೆಟ್ ಗಳನ್ನು ಪೂರೈಸಿದರು. ಈ ಮೂಲಕ ಭಾರತದ ಮಾಜಿ ಬೌಲರ್ ಗಳಾದ ಅನಿಲ್ ಕುಂಬ್ಳೆ ಹಾಗೂ ಎರ್ರಪಲ್ಲಿ ಪ್ರಸನ್ನ ಅವರ ಸಾಧನೆಯನ್ನು ಸರಿಗಟ್ಟಿ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಕನ್ನಡಿಗರಾದ ಕುಂಬ್ಳೆ ಹಾಗೂ ಪ್ರಸನ್ನ ಕೂಡ 34 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು.
ಏಶ್ಯದ ವೇಗದ ಬೌಲರ್ ಗಳ ಪೈಕಿ ಪಾಕಿಸ್ತಾನದ ವಕಾರ್ ಯೂನಿಸ್ ಮಾತ್ರ ಬುಮ್ರಾಗಿಂತ ಮುಂದಿದ್ದಾರೆ. ಯೂನಿಸ್ 27 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ವೇಗವಾಗಿ 150 ಟೆಸ್ಟ್ ವಿಕೆಟ್ ಗಳನ್ನು ಪಡೆದ ಭಾರತದ ಬೌಲರ್ ಗಳು
1.ಆರ್. ಅಶ್ವಿನ್-29 ಪಂದ್ಯಗಳು
2. ರವೀಂದ್ರ ಜಡೇಜ-32 ಪಂದ್ಯಗಳು
3. ಎರ್ರಪಲ್ಲಿ ಪ್ರಸನ್ನ-34 ಪಂದ್ಯಗಳು
3. ಅನಿಲ್ ಕುಂಬ್ಳೆ-34 ಪಂದ್ಯಗಳು
3.ಜಸ್ಪ್ರೀತ್ ಬುಮ್ರಾ-34 ಪಂದ್ಯಗಳು
4.ಹರ್ಭಜನ್ ಸಿಂಗ್-35 ಪಂದ್ಯಗಳು
5. ಬಿ.ಎಸ್. ಚಂದ್ರಶೇಖರ್-36 ಪಂದ್ಯಗಳು