ಭಾರತ- ಪಾಕ್ ಪಂದ್ಯ ಬಹಿಷ್ಕರಿಸಲು ಕರೆ
ಬಲಪಂಥೀಯರಿಂದ ʼXʼನಲ್ಲಿ #BoycottIndoPakMatch #ShameOnBCCI ಟ್ರೆಂಡಿಂಗ್
Photo: Twitter/ICC
ಅಹ್ಮದಾಬಾದ್: ಭಾರತದಲ್ಲಿ ವಿಶ್ವಕಪ್ ಜ್ವರ ಹೆಚ್ಚಿಸಿರುವ ಭಾರತ- ಪಾಕಿಸ್ತಾನ ನಡುವಿನ ಪಂದ್ಯವು ಶನಿವಾರ ನಡೆಯಲಿದೆ. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಈ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ʼxʼ ನಲ್ಲಿ #BoycottIndoPakMatch ಅಭಿಯಾನ ನಡೆಯುತ್ತಿದೆ.
ಸೆ.13 ರಂದು, ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಕರ್ನಲ್ ಒಬ್ಬ ಮೇಜರ್ ಮತ್ತು ರಾಷ್ಟ್ರೀಯ ರೈಫಲ್ಸ್ ಘಟಕದ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದರೂ, ಭಾರತ ಆ ದೇಶದೊಂದಿಗೆ ಕ್ರಿಕೆಟ್ ಆಡುತ್ತಿರುವುದಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ – ಪಾಕ್ ಪಂದ್ಯವನ್ನು ಆಕರ್ಷಣೀಯ ಪಂದ್ಯವಾಗಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ಸ್ಟೇಡಿಯಂನಲ್ಲಿ ಬಾಲಿವುಡ್ ಗಾಯಕರಾದ ಅರಿಜಿತ್ ಸಿಂಗ್, ಶಂಕರ್ ಮಹಾದೇವನ್ ಮತ್ತು ಸುಖ್ವಿಂದರ್ ಸಿಂಗ್ ಸಂಗೀತ ಪ್ರದರ್ಶನ ನೀಡಲಿದ್ದಾರೆ. ವಿಶ್ವಕಪ್ ನ ಉದ್ಘಾಟನೆಗೆ ಯಾವುದೇ ಕಾರ್ಯಕ್ರಮ ಆಯೋಜಿಸದ ಬಿಸಿಸಿಐ ಪಾಕ್ ವಿರುದ್ಧದ ಪಂದ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ತಂಡಕ್ಕೆ ಅಹ್ಮದಾಬಾದ್ ನಲ್ಲಿ ನೀಡಿದ ಸ್ವಾಗತ ಹಲವರ ಕಂಪು ಕೆಂಪಾಗಿಸಿದೆ.
My Fauzi brothers asking me do Israel also welcome Hamas terrorists /Ppl of Hamas controlled Area like this as BCCI is doing ?@BCCI This is ABSOLUTE betrayal with the soldiers who laid down their life for Bharat pic.twitter.com/yhXVfZrkxh
— Major Surendra Poonia (@MajorPoonia) October 12, 2023
@MajorPoonia ಎಂಬ x ಬಳಕೆದಾರರು, “ಬಿಸಿಸಿಐ ಸ್ವಾಗತ ನೀಡಿದಂತೆ ಇಸ್ರೇಲ್ ಏನಾದರೂ ಹಮಾಸ್ ನಿಯಂತ್ರಿತ ಪ್ರದೇಶದ ಭಯೋತ್ಪಾದಕರಿಗೆ ಸ್ವಾಗತ ನೀಡಿದೇಯೇ? ಎಂದು ರಕ್ಷಣಾಪಡೆಯ ನನ್ನ ಸ್ನೇಹಿತರು ನನ್ನನ್ನು ಕೇಳುತ್ತಿದ್ದಾರೆ. @BCCI ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ದ್ರೋಹ ಮಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.
@mustakecare (ಸನಾತನಿ ವಾರಿಯರ್) ಎಂಬ ಬಳಕೆದಾರರು “ ಅವರು ನಮಗೆ ಏನು ಮಾಡುತ್ತಿದ್ದಾರೆ ನೋಡಿ.. #JayShah ಬಿಸಿಸಿಐ ಮಿತಿ ಮೀರಿದೆ. ಎಲ್ಲಾ ಇಂಡೋ ಪಾಕ್ ಮ್ಯಾಚ್ ಗಳನ್ನು ಮತ್ತು ಪ್ರಾಯೋಜಕರನ್ನು ಬಹಿಷ್ಕರಿಸುವ ಸಮಯ ಬಂದಿದೆ.
ನಮ್ಮ ಸೈನಿಕರ ಬಗ್ಗೆ ಬೇಸರವಾಗುತ್ತಿದೆ. ಸೈನಿಕರಿಗೆ ಬೆಂಬಲ ವ್ಯಕ್ತಪಡಿಸೋಣ. ಆ ಮೂಲಕ ನಾವು ನಮ್ಮ ರಾಷ್ಟ್ರದೊಂದಿಗೆ ನಿಲ್ಲೋಣ. #ShameOnBCCI #BoycottBCCI #BoycottIndoPakMatch #PrayForIndia” ಎಂದು ಬರೆದುಕೊಂಡಿದ್ದಾರೆ.