ವಿನೇಶ್ ಫೋಗಟ್ ಅರ್ಜಿ ತಿರಸ್ಕಾರಕ್ಕೆ ಕಾರಣ ನೀಡಿದ ಸಿಎಎಸ್
ವಿನೇಶ್ ಫೋಗಟ್ | PC : PTI
ಹೊಸದಿಲ್ಲಿ, ಆ.19: ಅತ್ಲೀಟ್ಗಳು ತಮ್ಮ ತೂಕದ ಮಿತಿಗಿಂತ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಯಾವುದೇ ಸಂದರ್ಭದಲ್ಲೂ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕ್ರೀಡಾ ನ್ಯಾಯ ಮಂಡಳಿಯು(ಸಿಎಎಸ್) ಅಭಿಪ್ರಾಯಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ನಲ್ಲಿ ತಾನು ಅನರ್ಹಗೊಂಡಿದ್ದನ್ನು ಪ್ರಶ್ನಿಸಿ ಕುಸ್ತಿಪಟು ವಿನೇಶ್ ಪೋಗಟ್ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ಸಿಎಎಸ್ ಸೋಮವಾರ ವಿವರವಾದ ತೀರ್ಪನ್ನು ಪ್ರಕಟಿಸಿತು. ವಿನೇಶ್ ಫೋಗಟ್ ಅವರ ಅರ್ಜಿಯನ್ನು ತಿರಸ್ಕರಿಸಿರುವುದಕ್ಕೆ ಕಾರಣ ನೀಡಿದೆ.
ಸಿಎಎಸ್ನ ತಾತ್ಕಾಲಿಕ ಸಮಿತಿಯು ಆಗಸ್ಟ್ 14ರಂದು ನೀಡಿದ ಒಂದು ಸಾಲಿನ ತೀರ್ಪಿನಲ್ಲಿ ಅನರ್ಹತೆ ಪ್ರಶ್ನಿಸಿದ್ದ ವಿನೇಶ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
Next Story