ಚಾಂಪಿಯನ್ಸ್ ಟ್ರೋಫಿ | ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ವ್ಯರ್ಥ; ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ವರುಣ್ ಚಕ್ರವರ್ತಿಗೆ 5 ವಿಕೆಟ್

PC | @ICC
ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ- ನ್ಯೂಝಿಲೆಂಡ್ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲೆಂಡ್ ತಂಡವನ್ನು ಸೋಲಿಸಿ, ಭರ್ಜರಿ ಜಯ ಗಳಿಸಿದೆ.
ಭಾರತ ನೀಡಿದ 250 ರನ್ ಗಳ ಬೆನ್ನಟ್ಟಿದ ನ್ಯೂಝಿಲೆಂಡ್ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ವಿಲ್ ಯಂಗ್ 35 ಎಸೆತಗಳಲ್ಲಿ3 ಬೌಂಡರಿ ನೆರವಿನೊಂದಿಗೆ 22 ರನ್ ಗಳಿಸಿ ಔಟಾದರೆ, ರಚಿನ್ ರವೀಂದ್ರ 12 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.
ನಂತರ ಬಂದ ಕೇನ್ ವಿಲಿಯಮ್ಸನ್ 120 ಎಸೆತಗಳಲ್ಲಿ 7 ಬೌಂಡರಿ ನೆರವಿನೊಂದಿಗೆ 81 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ಯಾವುದೇ ಆಟಗಾರರಲ್ಲಿ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ.
ಡೇರಿಲ್ ಮಿಚೆಲ್ 17 ರನ್, ಟಾಮ್ ಲ್ಯಾಥಮ್ 14 ರನ್ , ಗ್ಲೆನ್ ಫಿಲಿಪ್ಸ್ 12 ರನ್, ಮೈಕೆಲ್ ಬ್ರೇಸ್ವೆಲ್ 2 ರನ್, ಮಿಚೆಲ್ ಸ್ಯಾಂಟ್ನರ್ 28 ರನ್, ಮ್ಯಾಟ್ ಹೆನ್ರಿ 2 ರನ್ ಗಳಿಸಿ ತಂಡವು ಆಲೌಟ್ ಆಯಿತು.
ಭಾರತದ ಪರ ವರುಣ್ ಚಕ್ರವರ್ತಿ 5 ವಿಕೆಟ್ , ಕುಲ್ ದೀಪ್ ಯಾದವ್ 2 ವಿಕೆಟ್, ಅಕ್ಷರ್ ಪಟೇಲ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.