ಚಾಂಪಿಯನ್ಸ್ ಟ್ರೋಫಿ | 264ಕ್ಕೆ ಆಲೌಟಾದ ಆಸ್ಟ್ರೇಲಿಯಾ
ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ ಅರ್ಧ ಶತಕ

PC |@ICC
ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ- ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ 265 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ಕೂಪರ್ ಕೊನೊಲಿ ಶೂನ್ಯದಲ್ಲಿ ಔಟಾದರೆ, ಟ್ರಾವಿಸ್ ಹೆಡ್ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್ ನೆರವಿನೊಂದಿಗೆ 39 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ಮಾರ್ನಸ್ ಲ್ಯಾಬುಶೇನ್ 36 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 29 ರನ್ ಗಳಿಸಿ ಔಟಾದರೆ, ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ನಂತರ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಆಸರೆಯಾದರೂ, 36.4ನೇ ಓವರ್ ನಲ್ಲಿ 96 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 73 ರನ್ ಗಳಿಸಿ ಔಟಾದರೆ, ಗ್ಲೆನ್ ಮ್ಯಾಕ್ಸ್ವೆಲ್ 5 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.
ಬೆನ್ ದ್ವಾರ್ಶುಯಿಸ್ 29 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 19 ರನ್ ಗಳಿಸಿ ಔಟಾದರೆ, ಅಲೆಕ್ಸ್ ಕ್ಯಾರಿ 57 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 61 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ಆಟಗಾರರಲ್ಲಿ ಉತ್ತಮ ಪ್ರದರ್ಶನ ಕಂಡು ಬರದೆ ಆಸ್ಟ್ರೇಲಿಯಾ ತಂಡವು ಆಲೌಟಾಯಿತು.
ಭಾರತದ ಪರ ಮುಹಮ್ಮದ್ ಶಮಿ 3 ವಿಕೆಟ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.