ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ‘ಕಿಂಗ್ಸ್’

PC | X/@ChennaiIPL credit
ಚೆನ್ನೈ: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮಾ.23ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ 2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಸಿಎಸ್ಕೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಸಿಎಸ್ಕೆ ಯಶಸ್ಸು ಸ್ಪಿನ್ನರ್ಗಳ ಪ್ರದರ್ಶನ ಹಾಗೂ ಪವರ್ಪ್ಲೇನಲ್ಲಿ ಅದರ ಸಾಮರ್ಥ್ಯವನ್ನು ಅವಲಂಬಿಸಿದೆ.
ನಾಯಕ: ಋತುರಾಜ್ ಗಾಯಕ್ವಾಡ್
ಕೋಚ್: ಸ್ಟೀಫನ್ ಫ್ಲೆಮಿಂಗ್
ತವರು ಮೈದಾನ: ಎಂ.ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ
ಶ್ರೇಷ್ಠ ಸಾಧನೆ: ಚಾಂಪಿಯನ್ಸ್(2010, 2011, 2018, 2021,2023)
ಹಿಂದಿನ ಆವೃತ್ತಿಯ ಸಾಧನೆ: 5ನೇ ಸ್ಥಾನ
ಪ್ರಮುಖ ಅಂಕಿ-ಅಂಶಗಳು
1.ಸ್ಪಿನ್ ಸ್ನೇಹಿ ಪಿಚ್
ಸಿಎಸ್ಕೆ ತಂಡದ ತವರು ಮೈದಾನವು ಸ್ಪಿನ್ನರ್ಗಳ ಸ್ನೇಹಿಯಾಗಿ ಮುಂದುವರಿಯಲಿದ್ದು, ರವೀಂದ್ರ ಜಡೇಜ, ಆರ್.ಅಶ್ವಿನ್ ಹಾಗೂ ನೂರ್ ಅಹ್ಮದ್ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಚಿಪಾಕ್ ಅಂಗಣದಲ್ಲಿ ಸ್ಪಿನ್ನರ್ಗಳು 7.13 ಇಕಾನಮಿ ರೇಟ್ ಹೊಂದಿದ್ದಾರೆ.
2. ‘ಫಿನಿಶಿಂಗ್ ಮಾಂತ್ರಿಕ’ ಎಂ.ಎಸ್. ಧೋನಿ
ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಧೋನಿ ಅವರು ಕೇವಲ 73 ಎಸೆತಗಳಲ್ಲಿ 13 ಸಿಕ್ಸರ್ ಹಾಗೂ 14 ಬೌಂಡರಿ ಗಳಿಸಿದ್ದಾರೆ. 11 ಇನಿಂಗ್ಸ್ಗಳಲ್ಲಿ 8 ಬಾರಿ ಅಜೇಯವಾಗುಳಿದು ಕೆಳ ಕ್ರಮಾಂಕದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದಾರೆ. 2024ರ ಐಪಿಎಲ್ನಲ್ಲಿ 220.54ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಮಾಡಿದ್ದು, ಒಂದೇ ಋತುವಿನಲ್ಲಿ 100 ಪ್ಲಸ್ ರನ್ನಲ್ಲಿ ಬ್ಯಾಟರ್ವೊಬ್ಬನ 2ನೇ ಗರಿಷ್ಠ ಸ್ಟ್ರೈಕ್ರೇಟ್ ಇದಾಗಿದೆ.
3. ಪವರ್ ಪ್ಲೇನಲ್ಲಿ ನೀರಸ ಪ್ರದರ್ಶನ
ಕಳೆದ ಮೂರು ವರ್ಷಗಳಲ್ಲಿ ಸಿಎಸ್ಕೆ ಪವರ್ ಪ್ಲೇನಲ್ಲಿ 8.55ರ ರನ್ರೇಟ್ನಲ್ಲಿ ರನ್ ಗಳಿಸಿದೆ. ಇದು ಐಪಿಎಲ್ನಲ್ಲಿ 3ನೇ ಕನಿಷ್ಠ ಮೊತ್ತವಾಗಿದೆ. ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ 2025ರ ಐಪಿಎಲ್ನಲ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
*ಸಂಭಾವ್ಯ ಆಡುವ 11ರ ಬಳಗ
ಅಗ್ರ ಸರದಿ: ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ
ಮಧ್ಯಮ ಸರದಿ ಹಾಗೂ ಆಲ್ರೌಂಡರ್ಗಳು
ಶಿವಂ ದುಬೆ, ರವೀಂದ್ರ ಜಡೇಜ, ಎಂ.ಎಸ್.ಧೋನಿ, ಸ್ಯಾಮ್ ಕರನ್.
ಬೌಲರ್ಗಳು
ಆರ್.ಅಶ್ವಿನ್, ನೂರ್ ಅಹ್ಮದ್, ಮಥೀಶ ಪಥಿರನ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್: ಆಂಡ್ರೆ ಸಿದ್ದಾರ್ಥ್/ಅನ್ಶುಲ್ ಕಾಂಬೋಜ್