ಚೆಸ್: ಪ್ರಜ್ಞಾನಂದ ಎದುರು ಪರಾಭವಗೊಂಡ ಮಾಸ್ಟರ್ ವಿಶ್ವನಾಥನ್ ಆನಂದ್
ಪ್ರಜ್ಞಾನಂದ(X \ @rpraggnachess) , ವಿಶ್ವನಾಥನ್ ಆನಂದ್ (X \ @vishy64theking)
ಬೆಂಗಳೂರು: ಮಂಗಳವಾರ ಡಬ್ಲ್ಯೂಆರ್ ಮಾಸ್ಟರ್ಸ್ ಚೆಸ್ ಕ್ವಾರ್ಟರ್ ಫೈನಲ್ ನಲ್ಲಿ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಪ್ರಜ್ಞಾನಂದ ಎದುರು ಪರಾಭವಗೊಂಡಿದ್ದಾರೆ. ಕಪ್ಪು ಕಾಯಿಗಳೊಂದಿಗೆ ಆಡಿದ ವಿಶ್ವನಾಥನ್ ಆನಂದ್ ಒಡ್ಡಿದ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ 19 ವರ್ಷದ ಪ್ರಜ್ಞಾನಂದ ಯಶಸ್ವಿಯಾದರು.
ಕೇವಲ 10 ನಿಮಿಷಗಳನ್ನು ಹೊಂದಿದ್ದ ಪ್ರಜ್ಞಾನಂದ ಗೆಲ್ಲಲೇಬೇಕಾದ ಸ್ಥಿತಿಯಲ್ಲಿದ್ದರೆ, ಕೇವಲ ಆರು ನಿಮಿಷಗಳನ್ನು ಹೊಂದಿದ್ದ ವಿಶ್ವನಾಥನ್ ಆನಂದ್ ಅವರಿಗೆ ಸೆಮಿಫೈನಲ್ ಪ್ರವೇಶಿಸಲು ಕೇವಲ ಡ್ರಾ ಸಾಕಾಗಿತ್ತು. ಆದರೆ, ತಮ್ಮ ಬಿಳಿ ಕಾಯಿಗಳನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಜ್ಞಾನಂದ, ವಿಶ್ವನಾಥನ್ ಆನಂದ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.
Next Story