ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ರನ್ನು ಹಿಂದಿಕ್ಕಿದ ಪ್ರಜ್ಞಾನಂದ
ಫಿಡೆ ಲೈವ್ ರೇಟಿಂಗ್ಗಳಲ್ಲಿ ನಂ.1 ಪಟ್ಟ
ಆರ್.ಪ್ರಜ್ಞಾನಂದ | X \ @ChessbaseIndia
ನೆದರ್ಲ್ಯಾಂಡ್ಸ್: ವಿಶ್ವ ಚೆಸ್ ಚಾಂಪಿಯನ್ ಡಿಂಗ್ ಲಿರೇನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರನ್ನು ಹಿಂದಿಕ್ಕಿ ಆರ್.ಪ್ರಜ್ಞಾನಂದ ಅವರು ಫಿಡಿ ಲೈವ್ ರೇಟಿಂಗ್ ಗಳಲ್ಲಿ ನಂ.1 ಚೆಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.
ನೆದರ್ಲ್ಯಾಂಡ್ಸ್ನ ವಿಜ್ಕ್ ಆನ್ ಝೀನಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನ್ಮೆಂಟ್ನಲ್ಲಿ ಪ್ರಜ್ಞಾನಂದ ಅವರು ಈ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಪಾತ್ರವಾದರು. 18 ವರ್ಷದ ಪ್ರಜ್ಞಾನಂದ FIDE ಲೈವ್ ರೇಟಿಂಗ್ಗಳಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ.
ವಿಶ್ವನಾಥನ್ ಆನಂದ್ ಅವರು 2,748 ಪಾಯಿಂಟ್ ಗಳಿಸಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಪ್ರಜ್ಞಾನಂದ ಅವರು 2,748.3 ಪಾಯಿಂಟ್ ಗಳಿಸಿದ್ದಾರೆ.
ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ನಂತರ ಚೆಸ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.
Next Story