ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನ ಗೆದ್ದ ಅಕ್ಕ-ತಮ್ಮ | ರಮೇಶ್ ಬಾಬು, ನಾಗರತ್ನ ದಂಪತಿಗೆ ಸಂಭ್ರಮ
PC: @ChessbaseIndia
ಚೆನ್ನೈ : ವಿಶ್ವದ ಅತ್ಯಂತ ಪ್ರತಿಷ್ಠಿತ ಟೀಮ್ ಚೆಸ್ ಸ್ಪರ್ಧೆಯಲ್ಲಿ ತಮ್ಮ ಇಬ್ಬರು ಮಕ್ಕಳಾದ ಪ್ರಜ್ಞಾನಂದ ಹಾಗೂ ವೈಶಾಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ರಮೇಶ್ ಬಾಬು ಹಾಗೂ ನಾಗಲಕ್ಷ್ಮೀ ದಂಪತಿಯ ಸಂಭ್ರಮಕ್ಕೆ ಪಾರವೇ ಇಲ್ಲವಾಗಿದೆ.
ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಚಿನ್ನ ಜಯಿಸಿರುವ ಪುರುಷರ ತಂಡದ ಅವಿಭಾಜ್ಯ ಅಂಗವಾಗಿದ್ದರೆ, ಪ್ರಜ್ಞಾನಂದರ ಹಿರಿಯ ಸಹೋದರಿ ವೈಶಾಲಿ ಮಹಿಳೆಯರ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಚೆಸ್ ಬೇಸ್ಇಂಡಿಯಾ ಪೋಸ್ಟ್ ಮಾಡಿರುವ ವೀಡಿಯೊವೊಂದು ವೈರಲ್ ಆಗಿದ್ದು, ಇದರಲ್ಲಿ ಪ್ರಜ್ಞಾನಂದ, ವೈಶಾಲಿ ಹಾಗೂ ಅವರ ತಾಯಿ ನಾಗಲಕ್ಷ್ಮೀ ಒಟ್ಟಿಗೆ ಇರುವ ಚಿತ್ರವಿದೆ. ನಿಜವಾಗಿಯೂ ಹೆಮ್ಮೆಯ ತಾಯಿ ಎಂದು ಸಾಮಾಜಿಕ ಬಳಕೆದಾರರು ವೀಡಿಯೊದಲ್ಲಿ ಬರೆದಿದ್ದಾರೆ.
ನಮಗೆ ಪ್ರಜ್ಞಾನಂದ ಬಗ್ಗೆ ತುಂಬಾ ಹೆಮ್ಮೆ ಇದೆ. ನನ್ನ ಪುತ್ರಿ ವೈಶಾಲಿಯ ತಂಡವೂ ಚಿನ್ನದ ಪದಕ ಗೆದ್ದಿದೆ. ಹೀಗಾಗಿ ನಾವು ತುಂಬಾ ಸಂತೋಷಗೊಂಡಿದ್ದೇವೆ ಎಂದು ರಮೇಶ್ ಬಾಬು ಹೇಳಿದ್ದಾರೆ.
Next Story