ಚೀನಾ ಓಪನ್: ಮಾಳವಿಕಾ ಕ್ವಾರ್ಟರ್ ಫೈನಲ್ಗೆ
ಮಾಳವಿಕಾ | PC : PTI
ಬೀಜಿಂಗ್, ಸೆ.19: ಭಾರತೀಯ ಶಟ್ಲರ್ ಮಾಳವಿಕಾ ಬಾನ್ಸೋಡ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಚೀನಾ ಓಪನ್ನಲ್ಲಿ ಗುರುವಾರ ಗರಿಷ್ಠ ರ್ಯಾಂಕಿನ ಆಟಗಾರ್ತಿ ಕ್ರಿಸ್ಟಿ ಗಿಲ್ಮ್ಮೊರ್ರನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಈ ಮೂಲಕ ಮಾಳವಿಕಾ ಅವರು ಸೂಪರ್-1000 ಟೂರ್ನಿಯಲ್ಲಿ ಮೊದಲ ಬಾರಿ ಅಂತಿಮ-8ರ ಸುತ್ತು ಪ್ರವೇಶಿಸಿದ್ದಾರೆ.
43ನೇ ರ್ಯಾಂಕಿನ ಮಾಳವಿಕಾ ಒಂದು ಗಂಟೆ, 5 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡು ಬಾರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಜಯಿಸಿದ್ದ ಸ್ಕಾಟ್ಲ್ಯಾಂಡ್ನ ಗಿಲ್ಮ್ಮೊರ್ರನ್ನು 21-17, 19-21, 21-16 ಗೇಮ್ಗಳ ಅಂತರದಿಂದ ಮಣಿಸಿದರು.
ನಾನು ಇದೇ ಮೊದಲ ಬಾರಿ ಸೂಪರ್-1000 ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲಿದ್ದೇನೆ. ಹೀಗಾಗಿ ನನ್ನ ಕನಸು ನನಸಾಗಿದೆ ಹಾಗೂ ಇದು ನನ್ನ ಜೀವನದ ಅತಿದೊಡ್ಡ ಸಾಧನೆ ಎಂದು ಮಾಳವಿಕಾ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ.
ಈ ಗೆಲುವಿನ ಮೂಲಕ ಮಾಳವಿಕಾ ಅವರು ವಿಶ್ವದ ನಂ.25ನೇ ಆಟಗಾರ್ತಿ ಗಿಲ್ಮೊರ್ ವಿರುದ್ದ ಆಡಿರುವ 5 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿದರು. 22ರ ಹರೆಯದ ಮಾಳವಿಕಾ ಬುಧವಾರ ಇಂಡೋನೇಶ್ಯದ ಗ್ರೆಗೋರಿಯ ಮರಿಸ್ಕಾರನ್ನು ಸೋಲಿಸಿದ್ದರು.
ಸ್ಪರ್ಧಾವಳಿಯಲ್ಲಿರುವ ಭಾರತದ ಏಕೈಕ ಶಟ್ಲರ್ ಮಾಳವಿಕಾ ಮುಂದಿನ ಸುತ್ತಿನಲ್ಲಿ 4ನೇ ಶ್ರೇಯಾಂಕದ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್ ಜಪಾನ್ನ ಅಕಾನೆ ಯಮಗುಚಿ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.