ಚಿರಾಗ್ ಶೆಟ್ಟಿ-ಸಾತ್ವಿಕ್ ಕೋಚ್ ಮಥಿಯಾಸ್ ಬೋ ನಿವೃತ್ತಿ
PC : PTI
ಹೊಸದಿಲ್ಲಿ: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಅಗ್ರ ಶ್ರೇಯಾಂಕದ ಭಾರತೀಯ ಬ್ಯಾಡ್ಮಿಂಟನ್ ತಂಡ ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ನಾನು ಕೋಚಿಂಗ್ ವೃತ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಅವರ ಕೋಚ್ ಮಥಿಯಾಸ್ ಬೋ ಶನಿವಾರ ಹೇಳಿದ್ದಾರೆ.
ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಚಿರಾಗ್ ಹಾಗೂ ಸಾತ್ವಿಕ್ ಮಲೇಶ್ಯದ ಆ್ಯರೊನ್ ಚಿಯಾ ಹಾಗೂ ಸೊಹ್ ವೂ ಯಿಕ್ ಎದುರು 21-13, 14-21, 16-21 ಗೇಮ್ಗಳ ಅಂತರದಿಂದ ಸೋತಿದ್ದರು.
ನನ್ನ ಪಾಲಿಗೆ ನನ್ನ ಕೋಚಿಂಗ್ ದಿನಗಳು ಇಲ್ಲಿಗೆ ಮುಗಿಯಲಿವೆ. ನಾನು ಭಾರತದಲ್ಲಿ ಇಲ್ಲವೇ ಬೇರೆಲ್ಲಿಯೂ ಕೋಚ್ ಆಗಿ ಮುಂದುವರಿಯಲಾರೆ. ನಾನು ಬ್ಯಾಡ್ಮಿಂಟನ್ ಹಾಲ್ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಕೋಚ್ ಆಗಲು ಸಾಕಷ್ಟು ಒತ್ತಡವಿದೆ. ನಾನೀಗ ದಣಿದಿರುವೆ ಎಂದು ಡೆನ್ಮಾರ್ಕ್ನ 44ರ ಹರೆಯದ ಮಥಿಯಾಸ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
Next Story