ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ
ದೇವಜಿತ್ ಸೈಕಿಯಾ | PC : X
ಹೊಸದಿಲ್ಲಿ : ದೇಶದ ಕ್ರಿಕೆಟ್ ಮಂಡಳಿಯ ಹಂಗಾಮಿ ಕಾರ್ಯದರ್ಶಿಯನ್ನಾಗಿ ದೇವಜಿತ್ ಸೈಕಿಯಾರನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೋಮವಾರ ನೇಮಕ ಮಾಡಿದ್ದಾರೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.
ಸೈಕಿಯಾ ಈ ಹಿಂದೆ ಮಂಡಳಿಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಸಿಸಿಐ ಸಂವಿಧಾನದ ಆರ್ಟಿಕಲ್ 7.2(ಡಿ)ಅಡಿ ಅಧಿಕಾರ ಬಳಸಿ ಈ ನೇಮಕ ಮಾಡಿದ್ದಾರೆ.
ಸೈಕಿಯಾರ ಅಧಿಕಾರದ ಅವಧಿಯ ಬಗ್ಗೆ ಅನಿಶ್ಚಿತತೆ ಇದೆ. ಸೆಪ್ಟಂಬರ್ನಲ್ಲಿ ನಡೆಯಲಿರುವ ಚುನಾವಣೆ ತನಕ ಇಲ್ಲವೇ ಹೊಸ ಕಾರ್ಯದರ್ಶಿ ನೇಮಕವಾಗುವ ತನಕ ಈ ಹುದ್ದೆಯಲ್ಲಿರುತ್ತಾರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೆರವಾಗಿದೆ.
Next Story