ದುಬೈ ಟೆನಿಸ್ ಚಾಂಪಿಯನ್ಶಿಪ್-2024 ; ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾಗೆ ಸೋಲು
ಅರಿನಾ ಸಬಲೆಂಕಾ | Photo : NDTV
ದುಬೈ: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ನಂತರ ಮೊದಲ ಬಾರಿ ಅರಿನಾ ಸಬಲೆಂಕಾ ಸೋಲುಂಡಿದ್ದಾರೆ.
ದುಬೈ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 2ನೇ ರ್ಯಾಂಕಿನ ಆಟಗಾರ್ತಿ ಸಬಲೆಂಕಾರನ್ನು ಕ್ರೊಯೇಶಿಯದ ಡೊನಾ ವೆಕಿಕ್ 6-7(5), 6-3, 6-0 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
ಸಬಲೆಂಕಾ ವರ್ಷದ ಹಿಂದೆ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ವೆಕಿಕ್ರನ್ನು ಸೋಲಿಸಿ ವೃತ್ತಿಬದುಕಿನಲ್ಲಿ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
ಸಬಲೆಂಕಾ ಮೊದಲ ಸೆಟ್ನ್ನು ಟೈ-ಬ್ರೇಕರ್ನಲ್ಲಿ ಗೆದ್ದುಕೊಂಡರು. 6-3 ಅಂತರದಿಂದ 2ನೇ ಸೆಟನ್ನು ಜಯಿಸಿದ ವೆಕಿಕ್ ಸಮಬಲ ಸಾಧಿಸಿದರು. 3ನೇ ಹಾಗೂ ನಿರ್ಣಾಯಕ ಸೆಟನ್ನು 6-0 ಅಂತರದಿಂದ ಗೆದ್ದುಕೊಂಡ ವೆಕಿಕ್ 2019ರ ನಂತರ ಮೊದಲ ಬಾರಿ ಅಗ್ರ-2ನೇ ಆಟಗಾರ್ತಿಯ ಎದುರು ಮೊದಲ ಗೆಲುವು ದಾಖಲಿಸಿದರು.
ಇದೇ ವೇಳೆ, ವಿಂಬಲ್ಡನ್ ಚಾಂಪಿಯನ್ ಹಾಗೂ ವಿಶ್ವದ ನಂ.7ನೇ ಆಟಗಾರ್ತಿ ಮರ್ಕೆಟಾ ವೊಂಡ್ರೊಸೋವಾ ಅವರು ಪೇಟನ್ ಸ್ಟ್ಟೇರ್ನ್ಸ್ರನ್ನು 6-1,5-7, 6-2 ಸೆಟ್ಗಳ ಅಂತರದಿಂದ ಸೋಲಿಸಿದರು.