ಇಂಗ್ಲೆಂಡ್ ಕ್ರಿಕೆಟಿಗ ಲಿವಿಂಗ್ಸ್ಟೋನ್ಗೆ ಗಾಯ, ಲಕ್ನೊದ ಔಟ್ಫೀಲ್ಡ್ ಬಗ್ಗೆ ತೀವ್ರ ಟೀಕೆ
ಲಿವಿಂಗ್ಸ್ಟೋನ್ Photo: cricketworldcup.com
ಹೊಸದಿಲ್ಲಿ: ಭಾರತ ವಿರುದ್ಧ ರವಿವಾರ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ಕ್ಯಾಚ್ ಪಡೆಯುವ ವೇಳೆ ಇಂಗ್ಲೆಂಡ್ ಕ್ರಿಕೆಟಿಗ ಲಿಯಾಮ್ ಲಿವಿಂಗ್ಸ್ಟೋನ್ ಸ್ವತಃ ಗಾಯಗೊಂಡ ನಂತರ ಲಕ್ನೊದ ಎಕನಾ ಸ್ಟೇಡಿಯಮ್ನ ಔಟ್ ಫೀಲ್ಡ್ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ.
ಭಾರತದ ನಾಯಕ ರೋಹಿತ್ ಶರ್ಮಾ ನೀಡಿದ್ದ ಕ್ಯಾಚನ್ನು ಮುಂದಕ್ಕೆ ಡೈವ್ ಹೊಡೆದು ಪಡೆದ ಲಿವಿಂಗ್ಸ್ಟೋನ್ ಗಾಯಗೊಂಡಿದ್ದಾರೆ.
ಈಗಾಗಲೇ ಹಿಮಾಚಲಪ್ರದೇಶದ ಧರ್ಮಶಾಲಾ ಸ್ಟೇಡಿಯಮ್ನ ಔಟ್ಫೀಲ್ಡ್ ಬಗ್ಗೆಯೂ ಹಲವಾರು ದೂರುಗಳು ಬಂದಿದ್ದು, ಲಕ್ನೊದ ಘಟನೆಯು ಬಿಸಿಸಿಐಗೆ ಚಿಂತೆಗೀಡು ಮಾಡಿದೆ.
ಐಪಿಎಲ್ ವೇಳೆ ದೂರುಗಳು ಬಂದ ನಂತರ ಲಕ್ನೊದ ಔಟ್ ಫೀಲ್ಡನ್ನು ಸರಿಪಡಿಸಲಾಗಿತ್ತು. ಆದರೆ, ಇದೀಗ ಅದೇ ಸಮಸ್ಯೆ ಮರುಕಳಿಸಿದೆ.
ಲಕ್ನೊದಲ್ಲಿ ಗೆಲ್ಲಲು 230 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ 34.5 ಓವರ್ಗಳಲ್ಲಿ ಕೇವಲ 129 ರನ್ ಗಳಿಸಿ ಆಲೌಟಾಗಿತ್ತು. ಆರು ಪಂದ್ಯಗಳಲ್ಲಿ ಐದನೇ ಸೋಲು ಕಂಡಿರುವ ಇಂಗ್ಲೆಂಡ್ನ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನವಾಗಿದೆ.
ಆತಿಥೇಯ ಭಾರತವು ಸತತ ಆರು ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ.