ಸರ್ಫರಾಝ್ ಖಾನ್ ರನೌಟ್ಗೆ ಕ್ಷಮೆ ಯಾಚಿಸಿದ ರವೀಂದ್ರ ಜಡೇಜಾ
Photo : ANI
ರಾಜ್ಕೋಟ್: ಇಂಗ್ಲೆಂಡ್ ತಂಡದ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಸರ್ಫರಾಝ್ ಖಾನ್ ರನೌಟ್ ಆಗಿದ್ದಕ್ಜೆ ಕ್ಷಮೆ ಕೋರಿರುವ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ, ರನೌಟ್ ತಪ್ಪಿನ ಹೊಣೆಯನ್ನು ತಾವು ಹೊತ್ತುಕೊಂಡಿದ್ದಾರೆ.
ಸರ್ಫರಾಝ್ ಖಾನ್ 62 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಒಂದು ರನ್ ಗಳಿಸುವ ಮೂಲಕ ತಮ್ಮ ನಾಲ್ಕನೆ ಟೆಸ್ಟ್ ಶತಕ ಪೂರೈಸುವ ಯತ್ನಕ್ಕೆ ರವೀಂದ್ರ ಜಡೇಜಾ ಮುಂದಾದರು. ಆದರೆ, ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಸರ್ಫರಾಝ್ ಖಾನ್ ಅವರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದರು. ಸರ್ಫರಾಝ್ ಖಾನ್ ಮತ್ತೆ ಕ್ರೀಸ್ಗೆ ಮರಳುವ ವೇಳೆಗೆ ತೀರಾ ವಿಳಂಬವಾಗಿತ್ತು. ಇದರಿಂದಾಗಿ ಅತ್ಯುತ್ತಮ ಲಯದಲ್ಲಿದ್ದ ಸರ್ಫರಾಝ್ ಖಾನ್ ನಿರಾಸೆಯಿಂದ ಪೆವಿಲಿಯನ್ಗೆ ಮರಳಬೇಕಾಯಿತು.
ರವೀಂದ್ರ ಜಡೇಜಾರ ಈ ವರ್ತನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಿಗೇ ಕ್ಷಮಾಪಣಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ರವೀಂದ್ರ ಜಡೇಜಾ, "ಸರ್ಫರಾಝ್ ಖಾನ್ ಬಗ್ಗೆ ಬೇಸರವಾಗುತ್ತಿದೆ. ಅದು ನನ್ನ ತಪ್ಪು ನಿರ್ಧಾರವಾಗಿತ್ತು. ಉತ್ತಮವಾಗಿ ಆಡಿದರು" ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.