11.75 ಕೋಟಿ ರೂ.ಗೆ ಪಂಜಾಬ್ ಪಾಲಾದ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ | Photo: PTI
ದುಬೈ: ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್-2024ರ ಹರಾಜಿನಲ್ಲಿ ಭಾರತದ ವೇಗದ ಬೌಲರ್ ಹರ್ಷಲ್ ಪಟೇಲ್ 11.7 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾದರು.
2021ರ ಋತುವಿನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದ ಹರ್ಷಲ್ ಕಳೆದ ಮೂರು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.
2023ರ ಐಪಿಎಲ್ನಲ್ಲಿ ಬಲಗೈ ವೇಗದ ಬೌಲರ್ ಹರ್ಷಲ್ ಪರದಾಟ ನಡೆಸಿದ್ದು 9.66ರ ಇಕಾನಮಿ ರೇಟ್ನಲ್ಲಿ ಕೇವಲ 14 ವಿಕೆಟ್ ಪಡೆದಿದ್ದರು. ಹೀಗಾಗಿ ಹರಾಜಿಗೆ ಮುನ್ನ ಆರ್ಸಿಬಿ, ಹರ್ಷಲ್ರನ್ನು ಬಿಡುಗಡೆ ಮಾಡಿತ್ತು.
33ರ ಹರೆಯದ ಹರ್ಷಲ್ಗಾಗಿ ಗುಜರಾತ್ ಟೈಟಾನ್ಸ್ ಬಿಡ್ಡಿಂಗ್ ವಾರ್ ಆರಂಭಿಸಿತು. ಪಂಜಾಬ್ ಕಿಂಗ್ಸ್ ಕೊನೆಗೂ ಹರ್ಷಲ್ರೊಂದಿಗೆ ಒಪ್ಪಂದ ಮಾಡಿಕೊಂಡಿತು.
ಹರ್ಷಲ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ತೆರಳುವ ಮೊದಲು ಹರ್ಷಲ್ ಆರ್ಸಿಬಿಯಲ್ಲಿ ತನ್ನ ಐಪಿಎಲ್ ಪಯಣ ಆರಂಭಿಸಿದ್ದರು. 2021ರಲ್ಲಿ ಮತ್ತೆ ಬೆಂಗಳೂರು ತಂಡಕ್ಕೆ ವಾಪಸಾಗಿದ್ದರು.
Next Story