ಹೆಡ್, ಕ್ಲಾಸೆನ್ ಅಬ್ಬರ | ಐಪಿಎಲ್ ನಲ್ಲಿ ಬೃಹತ್ ರನ್ ಪೇರಿಸಿದ ಹೈದರಾಬಾದ್
ತನ್ನದೇ ಗರಿಷ್ಠ ಸ್ಕೋರ್ ಮುರಿದ ಎಸ್ ಆರ್ ಎಚ್ ; ಆರ್ಸಿಬಿ ಗೆಲ್ಲಲು ಬೇಕು 288 ರನ್
PC : X \ @IPL
ಬೆಂಗಳೂರು : ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಶತಕ(102 ರನ್, 41 ಎಸೆತ) ಹಾಗೂ ಹೆನ್ರಿಕ್ (67 ರನ್, 31 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ ನಡೆದ ಐಪಿಎಲ್ನ 30ನೇ ಪಂದ್ಯದಲ್ಲಿ 3 ವಿಕೆಟ್ಗಳ ನಷ್ಟಕ್ಕೆ 287 ರನ್ ಗಳಿಸಿದೆ.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗಳಿಸಿರುವ ತನ್ನದೇ ಗರಿಷ್ಠ ಸ್ಕೋರ್(277 ರನ್)ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. 68 ರನ್ಗೆ 1 ವಿಕೆಟ್ ಪಡೆದ ರೀಸ್ ಟೋಪ್ಲೆ ಐಪಿಎಲ್ನಲ್ಲಿ 3ನೇ ದುಬಾರಿ ಬೌಲರ್ ಎನಿಸಿಕೊಂಡರು. ಹೈದರಾಬಾದ್ ತಂಡ ಪ್ರಸಕ್ತ ಐಪಿಎಲ್ನಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ಪ್ರಸಕ್ತ ಐಪಿಎಲ್ನಲ್ಲಿ ಮೂರು ಬಾರಿ 250ಕ್ಕೂ ಅಧಿಕ ಸ್ಕೋರ್ ದಾಖಲಾಗಿದ್ದು ವಿಶೇಷ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸನ್ರೈಸರ್ಸ್ ತಂಡ ಆಸ್ಟ್ರೇಲಿಯದ ಆಟಗಾರ ಹೆಡ್ ಹಾಗೂ ದಕ್ಷಿಣ ಆಫ್ರಿಕಾದ ಆಟಗಾರ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದೆ.
ಅಬ್ದುಲ್ ಸಮದ್(ಔಟಾಗದೆ 37) ಹಾಗೂ ಮರ್ಕ್ರಮ್(ಔಟಾಗದೆ 32)ಸನ್ರೈಸರ್ಸ್ 287 ರನ್ ಗಳಿಸಲು ನೆರವಾದರು.
ಆರ್ಸಿಬಿ ಪರ ಲಾಕಿ ಫರ್ಗುಸನ್(2-52) ಯಶಸ್ವಿ ಬೌಲರ್ ಎನಿಸಿಕೊಂಡರು.