2024ರ ಟಿ-20 ವಿಶ್ವಕಪ್ ಕುರಿತು ಕಿರು ಮಾಹಿತಿ ಇಲ್ಲಿದೆ...
PC : NDTV
ನ್ಯೂಯಾರ್ಕ್: ಐಸಿಸಿ ಆಯೋಜಿಸುತ್ತಿರುವ ಒಂಭತ್ತನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್ ಅಮೆರಿಕ ಹಾಗೂ ಕೆರಿಬಿಯನ್ ದ್ವೀಪಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದ್ದು, ಜೂನ್ 2ರಂದು ಸಹ ಆತಿಥ್ಯ ರಾಷ್ಟ್ರ ಅಮೆರಿಕ ಹಾಗೂ ಕೆನಡಾ ನಡುವಿನ ಪಂದ್ಯದ ಮೂಲಕ ಟೂರ್ನಿಯು ಆರಂಭವಾಗಲಿದೆ.
ತಂಡಗಳು: ಈ ಬಾರಿ ಒಟ್ಟು 20 ತಂಡಗಳು ವಿಶ್ವಕಪ್ನಲ್ಲಿ ಭಾಗವಹಿಸಲಿವೆ. ಕಳೆದ ಆವೃತ್ತಿಯ ಟೂರ್ನಿಯಲ್ಲಿ 16 ತಂಡಗಳು ಸ್ಪರ್ಧಿಸಿದ್ದವು.
ಆತಿಥೇಯ ದೇಶಗಳು: ಅಮೆರಿಕ ಹಾಗೂ ಕೆರಿಬಿಯನ್ ದ್ವೀಪಗಳು(ವೆಸ್ಟ್ಇಂಡೀಸ್)
ಪಂದ್ಯಾವಳಿ ದಿನಾಂಕ: ಜೂನ್ 2ರಿಂದ 29ರ ತನಕ
ಸ್ಥಳಗಳು: ಅಮೆರಿಕದಲ್ಲಿ ಮೂರು ಹಾಗೂ ಕೆರಿಬಿಯನ್ನಲ್ಲಿ 6 ಸ್ಥಳಗಳು
ಒಟ್ಟು ಪಂದ್ಯಗಳು: 55
ಟೂರ್ನಮೆಂಟ್ನ ಮಾದರಿ:
ಟೂರ್ನಮೆಂಟ್ನ ಆರಂಭಿಕ ಹಂತದಲ್ಲಿ 4 ಗುಂಪಿನಲ್ಲಿರುವ ಐದು ತಂಡಗಳು ಪರಸ್ಪರ ಒಂದು ಬಾರಿ ಮುಖಾಮುಖಿಯಾಗಲಿವೆ.
ಅಗ್ರ ಎರಡು ತಂಡಗಳು ಟೂರ್ನಮೆಂಟ್ನ ಎರಡನೇ ಹಂತ ಸೂಪರ್-8ಕ್ಕೆ ತೇರ್ಗಡೆಯಾಗಲಿವೆ. ಪ್ರತಿ ಗುಂಪಿನ ಉಳಿದಿರುವ ಮೂರು ತಂಡಗಳು ಟೂರ್ನಮೆಂಟ್ನಿಂದ ನಿರ್ಗಮಿಸಲಿವೆ.
ಸೂಪರ್-8 ಹಂತದಲ್ಲಿ ತಂಡಗಳನ್ನು ಮತ್ತೊಮ್ಮೆ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ.ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳಿರುತ್ತವೆ. ಈ ತಂಡಗಳು ಆಯಾ ಗುಂಪಿನಲ್ಲಿ ಪರಸ್ಪರ ಒಂದು ಬಾರಿ ಸೆಣಸಾಡಲಿವೆ. ಸೂಪರ್-8 ಹಂತದ ಅಗ್ರ ಎರಡು ತಂಡಗಳು ಸೆಮಿ ಫೈನಲ್ಗೆ ತಲುಪುತ್ತವೆ. ಸೆಮಿ ಫೈನಲ್ನಲ್ಲಿ ವಿಜೇತರಾಗುವ ಎರಡು ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿವೆ.
ಪಂದ್ಯಗಳು ಟೈನಲ್ಲಿ ಕೊನೆಗೊಂಡರೆ ಫಲಿತಾಂಶವನ್ನು ಸೂಪರ್ ಓವರ್ನಲ್ಲಿ ನಿರ್ಧರಿಸಲಾಗುತ್ತದೆ. ಸೂಪರ್ ಓವರ್ನಲ್ಲೂ ಫಲಿತಾಂಶ ಟೈಗೊಂಡರೆ, ವಿನ್ನರ್ ನಿರ್ಧಾರವಾಗುವ ತನಕ ಸೂಪರ್ ಓವರ್ಗಳನ್ನು ಮುಂದುವರಿಸಲಾಗುತ್ತದೆ.
ಜೂನ್ 26ರಂದು ನಡೆಯುವ ಮೊದಲ ಸೆಮಿ ಫೈನಲ್ನಲ್ಲಿ 60 ನಿಮಿಷಗಳ ಹೆಚ್ಚುವರಿ ಸಮಯವಲ್ಲದೆ ಮೀಸಲು ದಿನ (ಜೂನ್ 27) ನಿಗದಿಪಡಿಸಲಾಗಿದೆ.
ಜೂನ್ 27ರಂದು ನಿಗದಿಯಾಗಿರುವ ಎರಡನೇ ಸೆಮಿ ಫೈಲ್ಗೆ 250 ಹೆಚ್ಚುವರಿ ನಿಮಿಷ ಲಭ್ಯವಿರಲಿದೆ.
ಜೂನ್ 29ರಂದು ನಡೆಯುವ ಫೈನಲ್ ಪಂದ್ಯಕ್ಕೆ ಜೂನ್ 30 ಮೀಸಲು ದಿನವಾಗಿದೆ.