ವಿಶ್ವಕಪ್ನಲ್ಲಿ ಅವಕಾಶ ಸಿಗದೇ ಇರುವುದಕ್ಕೆ ಬೇಸರವಾಗಿದೆ: ಇಶಾನ್ ಕಿಶನ್
Photo: instagram.com/ishankishan23/
ಹೊಸದಿಲ್ಲಿ: ಇತ್ತೀಚೆಗೆ ಭಾರತದಲ್ಲಿ ಕೊನೆಗೊಂಡಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಹಲವು ಪಂದ್ಯಗಳಲ್ಲಿ ಆಡದೇ ಇರುವುದಕ್ಕೆ ಭಾರತದ ಬ್ಯಾಟರ್ ಇಶಾನ್ ಕಿಶನ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೇಸರದ ಹೊರತಾಗಿಯೂ ವಿಶ್ವಕಪ್ ಬೆನ್ನಿಗೆ ಆರಂಭವಾಗಿ ರುವ ಟ್ವೆಂಟಿ-20 ಸರಣಿಯಲ್ಲಿ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶ್ವಕಪ್ ನಲ್ಲಿ ಭಾರತ ರನ್ನರ್ಸ್ ಅಪ್ ಆಗಿ ದ್ದು, ಇಶಾನ್ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳನ್ನು ಆಡಿದ್ದರು. ಒಂದು ಪಂದ್ಯದಲ್ಲಿ 47 ರನ್ ಗಳಿಸಿದರೆ, ಮತ್ತೊಂದು ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಎಡಗೈ ಬ್ಯಾಟರ್ ಆಸೀಸ್ ವಿರುದ್ದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಒಟ್ಟು 110 ರನ್ ಗಳಿಸಿದ್ದಾರೆ.
"ವಿಶ್ವಕಪ್ನಲ್ಲಿ ನಾವು ಚಾಂಪಿಯನ್ ತಂಡದ ರೀತಿ ಆಡಿದ್ದೆವು. ನನಗೆ ಹೆಚ್ಚು ಅವಕಾಶ ಸಿಗಲಿಲ್ಲ. ಇದರಿಂದ ನನಗೆ ಬೇಸರವಾಗಿದೆ. ನಿಮಗೆ ಅವಕಾಶ ಲಭಿಸಿದಾಗ ಅದನ್ನು ಬಳಸಿಕೊಳ್ಳಬೇಕು ''ಎಂದರು.
Next Story