ಭಾರತ – ಆಸ್ಟ್ರೇಲಿಯಾ 2 ನೇ ಏಕದಿನ : ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ
Photo: BCCI
ಇಂದೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಜೋಶ್ ಹ್ಯಾಝಲ್ವುಡ್ ತನ್ನ ಎರಡನೇ ಓವರ್ ನಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು 8 ರನ್ಗಳಿಗೆ ಔಟ್ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಶ್ರೇಯಸ್ ಅಯ್ಯರ್, 11 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಕೇವಲ 29 ಎಸೆತಗಳಲ್ಲಿ ಶುಭಮನ್ ಗಿಲ್ ಅವರೊಂದಿಗೆ 50 ರನ್ಗಳ ಜೊತೆಯಾಟವಾಡಿದರು. ಭಾರತ 9.5 ಓವರ್ಗಳಲ್ಲಿ 79/1 ತಲುಪಿದಾಗ, ಕ್ರೀಡಾಂಗಣದ ಮೇಲೆ ಕಪ್ಪು ಮೋಡಗಳು ಸೇರಿದ್ದರಿಂದ ಮಳೆಯು ಆಟವನ್ನು ನಿಲ್ಲಿಸಿತು. ಮಳೆ ನಿಂತಿದ್ದರಿಂದ ಈಗ ಆಟ ಮತ್ತೆ ಪ್ರಾರಂಭವಾಗಿದೆ. ಭಾರತ 1 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ.
Next Story