ಫಿಫಾ ಫುಟ್ಬಾಲ್ ರ್ಯಾಂಕಿಂಗ್ ನಲ್ಲಿ 127ನೇ ಸ್ಥಾನಕ್ಕೆ ಕುಸಿದ ಭಾರತ ತಂಡ
Photo Credit: PTI
ಹೊಸದಿಲ್ಲಿ: ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಗುರುವಾರ ಪ್ರಕಟಿಸಿರುವ ಪುರುಷರ ರ್ಯಾಂಕಿಂಗ್ಸ್ ನಲ್ಲಿ ಭಾರತ ತಂಡವು ಒಂದು ಸ್ಥಾನ ಕೆಳ ಜಾರಿ 127ನೇ ಸ್ಥಾನ ತಲುಪಿದೆ.
ಭಾರತದ ಫುಟ್ಬಾಲ್ ತಂಡವು 2025ರ ಮಾರ್ಚ್ ನಲ್ಲಿ ನಡೆದಿದ್ದ ಎಎಫ್ಸಿ ಏಶ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಡ್ರಾ ಸಾಧಿಸಿತ್ತು. ಈ ಫಲಿತಾಂಶದಿಂದಾಗಿ ಬಾಂಗ್ಲಾದೇಶ ತಂಡವು ಎರಡು ಸ್ಥಾನ ಭಡ್ತಿ ಪಡೆದು 183ನೇ ರ್ಯಾಂಕ್ ಗೆ ಏರಿದೆ.
ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ಯುರೋಪಿಯನ್ ಚಾಂಪಿಯನ್ ಸ್ಪೇನ್ ಹಾಗೂ ಫ್ರಾನ್ಸ್ ತಂಡಗಳು ಅಗ್ರ-3ರಲ್ಲಿ ಸ್ಥಾನ ಉಳಿಸಿಕೊಂಡಿವೆ.
Next Story